Bengaluru, ಏಪ್ರಿಲ್ 2 -- Lakshmi Panchami 2025: ಇಂದು (ಏಪ್ರಿಲ್ 2, ಬುಧವಾರ) ಲಕ್ಷ್ಮಿ ಪಂಚಮಿ. ಚೈತ್ರ ಮಾಸದ ಶುಕ್ಲಪಕ್ಷ ಪಂಚಮಿಯ ದಿನದಂದು ಲಕ್ಷ್ಮಿ ಪಂಚಮಿ ಬರುತ್ತದೆ. ಆ ಆಚರಣೆಯ ದಿನ ಲಕ್ಷ್ಮಿ ದೇವಿಯು ಭೂಮಿಗೆ ಬರುವ ದಿನ ಎಂಬ ನಂಬಿಕೆ ಇದೆ. ಲಕ್ಷ್ಮಿ ಪಂಚಮಿಯಂದು ಏನು ಮಾಡಬೇಕು? ಏನು ಮಾಡಬಾರದು ಎಂಬುದರ ಬಗ್ಗೆ ತಿಳಿಯೋಣ. ಲಕ್ಷ್ಮಿ ಪಂಚಮಿ ದಿನದಂದು, ಲಕ್ಷ್ಮಿ ದೇವಿಯು ಭೂಮಿಗೆ ಬಂದಾಗ, ಇದನ್ನು ಮನೆಯಲ್ಲಿ ಮಾಡುವುದರಿಂದ ಹಣದ ಮಳೆಯನ್ನೇ ಸುರಿಸುತ್ತಾಳೆ. ಅಂದರೆ ಆರ್ಥಿಕವಾಗಿ ಸಾಕಷ್ಟು ಲಾಭಗಳಿರುತ್ತವೆ. ಜೊತೆಗೆ ಅನೇಕ ಪ್ರಯೋಜನಗಳನ್ನು ಪಡೆಯಬಹುದು. ಜೀವನದಲ್ಲಿ ಸಾಕಷ್ಟು ಬದಲಾವಣೆಗಳು ಉಂಟಾಗುತ್ತವೆ. ನೀವು ತೊಂದರೆಗಳಿಂದ ಹೊರಬರಬಹುದು. ಪಂಚಮಿಯ ದಿನದಂದು ಏನು ಮಾಡಬೇಕೆಂದು ತಿಳಿಯೋಣ.

ಲಕ್ಷ್ಮಿ ಪಂಚಮಿಯನ್ನು ನಾಗ ಪಂಚಮಿ ಎಂದೂ ಕರೆಯಲಾಗುತ್ತದೆ. ಲಕ್ಷ್ಮಿ ಪಂಚಮಿಯಂದು ವಿಷ್ಣುವಿನ ಆದೇಶದಂತೆ ಲಕ್ಷ್ಮಿ ದೇವಿಯು ಭೂಮಿಗೆ ಬರುತ್ತಾಳೆ. ಈ ದಿನ ಲಕ್ಷ್ಮಿ ದೇವಿಯನ್ನು ಪೂಜಿಸುವುದರಿಂದ ವರ್ಷವಿಡೀ ಸಮೃದ್ಧಿ ಸಿಗುತ...