Bengaluru, ಫೆಬ್ರವರಿ 26 -- ಕ್ಷಣ ಕ್ಷಣಕ್ಕೂ ಜಾನು ಮೇಲೆ ಹದ್ದಿನ ಕಣ್ಣಿಟ್ಟಿದ್ದ ಜಯಂತ, ಜಾನು ಯಾರ ಜತೆ ಮಾತನಾಡ್ತಾಳೆ, ಯಾರ ಜತೆ ಇರ್ತಾಳೆ ಇದೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದ. ಇದಷ್ಟೇ ಅಲ್ಲ, ಅರಮನೆಯಂಥ ಮನೆಯಲ್ಲಿ ಒಬ್ಬೇ ಒಬ್ಬ ಕೆಲಸದವರು ಇಲ್ಲದಂತೆ ಮಾಡಿದ್ದ.

ಇಡೀ ಮನೆ ತುಂಬ ಸಿಸಿ ಕ್ಯಾಮರಾಗಳನ್ನು ಫಿಕ್ಸ್‌ ಮಾಡಿ, ಚಿನ್ನುಮರಿಯ ಚಲನವಲನಗಳನ್ನು ವೀಕ್ಷಿಸುತ್ತಿದ್ದ. ಇದೀಗ ಜಯಂತನ ಅಸಲಿ ಮುಖಗಳು ಒಂದೊಂದಾಗಿಯೇ ಪತ್ನಿ ಜಾನು ಮುಂದೆ ಬಯಲಾಗಿದೆ. ಗಂಡನಿಗೆ ಸರಿಯಾಗಿಯೇ ಕ್ಲಾಸ್‌ ತೆಗೆದುಕೊಂಡಿದ್ದಾಳೆ ಜಾನು.

ಹೀಗೆ ಸೈಕೋ ಗಂಡನ ವಿರುದ್ಧ ತಿರುಗಿ ಬಿದ್ದಿದ್ದೇ ತಡ, ಸೋಷಿಯಲ್‌ ಮೀಡಿಯಾದಲ್ಲಿ ಜಯಂತನ ಅತಿರೇಕಕ್ಕೆ ನೆಟ್ಟಿಗರೂ ಕೈ ಜೋಡಿಸಿದ್ದಾರೆ. ಬಗೆಬಗೆ ಕಾಮೆಂಟ್‌ಗಳ ಮೂಲಕವೇ ಉತ್ತರ ನೀಡುತ್ತಿದ್ದಾರೆ. ಅಂತ ಕೆಲವು ಆಯ್ದ ವೀಕ್ಷಕರ ಕಾಮೆಂಟ್‌ಗಳು ಇಲ್ಲಿವೆ.

"ಈ ವಾರದ ಕಿಚ್ಚನ ಚಪ್ಪಾಳೆ ಅಮೋಘವಾದ ಡೈರೆಕ್ಟರ್ ಗಳಿಗೆ ಜೈ", "ಜಾನು ಈಗ ಚಿನ್ನು ಮರಿ ಅಲ್ಲ ಮಾರಿ, ಜಯಂತ್ ಈಗ ನೀನು ಈಗ ಕುರಿಮರಿ", "ಈ ವಾರದ ಕ...