ಭಾರತ, ಮಾರ್ಚ್ 30 -- Lakshmi nivasa Serial: ಜೀ ಕನ್ನಡದಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 8ರಿಂದ 9 ಗಂಟೆ ವರೆಗೆ ಪ್ರಸಾರ ಕಾಣುತ್ತಿರುವ ಸೀರಿಯಲ್‌ ಲಕ್ಷ್ಮೀ ನಿವಾಸ. ಹಲವು ಕವಲುಗಳಾಗಿ ತೆರೆದುಕೊಳ್ಳುವ ಈ ಧಾರಾವಾಹಿ, ಸದ್ಯ ರೋಚಕ ಮತ್ತು ಕುತೂಹಲ ಘಟ್ಟದಲ್ಲಿದೆ. ಸೈಕೋ ಜಯಂತನ ನಿಜಬಣ್ಣ ಜಾಹ್ನವಿಯ ಮುಂದೆ ಬಯಲಾಗಿದೆ. ಇದಷ್ಟೇ ಅಲ್ಲ, ಸಚಿನ್‌ನ ಸಹಾಯದಿಂದ ಜಯಂತ್‌ ಈ ಹಿಂದೆ ಏನೆಲ್ಲ ಮಾಡಿದ್ದ ಎಂಬುದನ್ನೂ ತಿಳಿದುಕೊಂಡಿದ್ದಾಳೆ ಜಾನು. ಇದೆಲ್ಲದರಿಂದ ನೊಂದ ಜಾನು, ತಾನು ಮೋಸ ಹೋದೆ ಎಂದು ಕೊರಗಿ ಆತ್ಮಹತ್ಯೆ ನಿರ್ಧಾರ ಮಾಡಿದ್ದಾಳೆ!

ಸದ್ಯ ಜಯಂತ್‌ -ಜಾಹ್ನವಿ ಮತ್ತು ಭಾವನಾ ಸಿದ್ದೇಗೌಡ್ರು ಶ್ರೀಲಂಕಾದಲ್ಲಿ ಮುಖಾಮುಖಿಯಾಗಿದ್ದಾರೆ. ಎಲ್ಲರೂ ಸೇರಿ ಒಂದಷ್ಟು ಸ್ಥಳಗಳನ್ನು ಸುತ್ತಾಡಿದ್ದಾರೆ. ಒಟ್ಟಿಗೆ ಊಟ ಮಾಡಿದ್ದಾರೆ. ಒಳಿಕೆ ತಂತಮ್ಮ ರೂಮಿಗೆ ತೆರಳಿದ್ದಾರೆ. ಹೀಗೆ ತೆರಳಿದ್ದೇ ತಡ, ಜಯಂತನನ್ನು ನೈಸ್‌ ಮಾಡಿ, ತನಗೆ ನೀಡುತ್ತಿದ್ದ ಮಾತ್ರೆ ಬಗ್ಗೆ ತಿಳಿದುಕೊಂಡಿದ್ದಾಳೆ. ಅದಾದ ಮೇಲೆ ಅದೇ ಮಾತ್ರೆಯನ್ನು ಜಯಂತ...