Bengaluru, ಏಪ್ರಿಲ್ 3 -- Lakshmi Nivasa Serial: ಕನ್ನಡ ಕಿರುತೆರೆಯಲ್ಲಿ ಇತ್ತೀಚಿನ ಕೆಲ ದಿನಗಳಿಂದ ಒಂದಾದ ಮೇಲೊಂದು ಬದಲಾವಣೆಗಳು ಘಟಿಸುತ್ತಲೇ ಇವೆ. ಹೊಸ ಧಾರಾವಾಹಿಗಳ ಆಗಮನ ಒಂದೆಡೆಯಾದರೆ, ಮತ್ತೊಂದು ಕಡೆ ಟಾಪ್‌ ಸೀರಿಯಲ್‌ಗಳೇ ಅಂತ್ಯ ಕಾಣುತ್ತಿವೆ. ಇನ್ನು ಕೆಲವು ಸೀರಿಯಲ್‌ಗಳ ಸಮಯದಲ್ಲಿ ಬದಲಾವಣೆಗಳಾದರೆ, ಪಾತ್ರಧಾರಿಗಳೂ ಬದಲಾಗುತ್ತಿದ್ದಾರೆ. ಹೀಗೆ ನಿಂತ ನೀರಾಗದೆ, ಸದಾ ಹರಿವ ನೀರಂತೆ, ಸಾಕಷ್ಟು ಬದಲಾವಣೆಗಳ ಜತೆಗೆ ಅಚ್ಚರಿಗೂ ಒಗ್ಗಿಕೊಳ್ಳುತ್ತಿದೆ ಕನ್ನಡ ಕಿರುತೆರೆ. ಇದೀಗ ಜೀ ಕನ್ನಡದಲ್ಲಿ ಇನ್ನೇನು ಶೀಘ್ರದಲ್ಲಿ ಹೊಸ ಧಾರಾವಾಹಿ ʻಕರ್ಣʼ ಪ್ರಸಾರ ಆರಂಭಿಸಲಿದೆ. ಆ ಸೀರಿಯಲ್‌ನಿಂದಲೂ ಒಂದಷ್ಟು ಬದಲಾವಣೆಗಳನ್ನು ನಿರೀಕ್ಷಿಸಬಹುದು.

ಒಂದು ವಾಹಿನಿಯಲ್ಲಿ ಹೊಸ ಸೀರಿಯಲ್‌ ಪ್ರಸಾರವಾಗಲಿದೆ ಎಂದಾದರೆ, ಅಲ್ಲಿ ಒಂದು ಧಾರಾವಾಹಿ ಮುಕ್ತಾಯವಾಗಬೇಕು ಅಥವಾ ಇನ್ನೊಂದರ ಸಮಯದಲ್ಲಿ ಬದಲಾವಣೆ ಆಗಬೇಕು. ಇದೀಗ ಜೀ ಕನ್ನಡದಲ್ಲಿ ಪ್ರೋಮೋ ಮೂಲಕವೇ ಗಮನ ಸೆಳೆದ ʻಕರ್ಣʼ ಇನ್ನೇನು ಶೀಘ್ರದಲ್ಲಿಯೇ ಪ್ರಸಾರವಾಗುವ ಸಾಧ್ಯತೆ ಇದೆ....