ಭಾರತ, ಮೇ 16 -- Lakshmi Nivasa Serial: ಲಕ್ಷ್ಮೀ ನಿವಾಸ ಸೀರಿಯಲ್‌ ದಿನದಿಂದ ದಿನಕ್ಕೆ ಕುತೂಹಲದತ್ತ ಸಾಗುತ್ತಿದೆ. ಅದರಲ್ಲೂ ಜಯಂತ್‌ ಮತ್ತು ಜಾನು ಮದುವೆ ಆದ ಮೇಲಂತೂ ಜಾನು ಬದುಕು ಹೇಗೆ ಒಮ್ಮಿಂದೊಮ್ಮೆಲೇ ಬದಲಾಯ್ತೋ ಈ ಸೀರಿಯಲ್‌ ವೀಕ್ಷಕರ ಮನಸ್ಥಿತಿಯೂ ಒಮ್ಮೆಗೆ ಬದಲಾಗಿದೆ. ಅದಕ್ಕೆ ಕಾರಣ ಜಯಂತನ ವರ್ತನೆ! ಒಂದು ರೀತಿ ಅನುಮಾನ ಪಿಶಾಚಿಯಾಗಿಯೇ ವರ್ತಿಸುತ್ತಿದ್ದಾನೆ. ಜಾನ್ವಿ ಮೇಲೆ ಹದ್ದಿನ ಕಣ್ಣಿಟ್ಟಿದ್ದಾನೆ. ಆಕೆಯ ಸೂಕ್ಷ್ಮ ಚಲನ ವಲನವನ್ನೂ ಗಮನಿಸುತ್ತಿದ್ದಾನೆ.

ಪತ್ನಿಯನ್ನು ಮಾತನಾಡಿಸಿದ ಸ್ನೇಹಿತನನ್ನೂ ಕೊಲೆ ಮಾಡುವ ಯತ್ನ ಮಾಡಿದ್ದಾನೆ. ಆಗೊಮ್ಮೆ ಈಗೊಮ್ಮೆ ಜಾನುಗೂ ಅತಿಯಾದ ಪ್ರೀತಿ ತೋರಿಸಿ ಇಕ್ಕಟ್ಟಿಗೂ ಸಿಲುಕಿಸಿದ್ದಾನೆ. ಒಂಟಿ ಮನೆ, ದೊಡ್ಡ ಬಿಜಿನೆಸ್‌ಮನ್‌ ಆದರೂ ಇಡೀ ಬಂಗಲೆಯಲ್ಲಿ ಜಾನು ಬಂಧಿ. ಹೊರ ಜಗತ್ತಿನ ನಂಟೇ ಕತ್ತರಿಸುತ್ತಿದ್ದಾನೆ ಜಯಂತ್.‌ ಬಂಗಾರದ ಪಂಜರದಲ್ಲಿ ಇಟ್ಟು ಪತ್ನಿಯನ್ನು ಸಾಕುತ್ತಿದ್ದಾನೆ. ಪತಿಯ ವರ್ತನೆ ಆಕೆಗೂ ಅಸಹನೀಯ ಅನಿಸಿದೆಯಾದರೂ, ಪತಿಯ ಪ್ರೀತಿಗೆ ಕರಿಗಿ ಹೋಗಿದ್ದಾಳೆ. ‌...