Bengaluru, ಫೆಬ್ರವರಿ 17 -- Lakshmi Nivasa Serial: ಜೀ ಕನ್ನಡದಲ್ಲಿ ಲಕ್ಷ್ಮೀ ನಿವಾಸ ಒಂದು ಗಂಟೆಯ ಮಹಾ ಮನರಂಜನೆ ನೀಡುವ ಬಹುತಾರಾಗಣದ, ಬಹು ಕಥೆಗಳುಳ್ಳ ಧಾರಾವಾಹಿ. ಹಲವು ಪದರಗಳಲ್ಲಿ ತೆರೆದುಕೊಂಡಿರುವ ಲಕ್ಷ್ಮೀ ನಿವಾಸ ಸೀರಿಯಲ್‌ನಲ್ಲಿ ಒಂದಲ್ಲ, ಎರಡಲ್ಲ, ಮೂರಲ್ಲ, ಮಿಡಲ್‌ ಕ್ಲಾಸ್‌ ಮನಸ್ಥಿತಿಗಳ ಆರೇಳು ಕಥೆಗಳಿವೆ. ನಿತ್ಯ ವೀಕ್ಷಕರಿಗೆ ಬಗೆಬಗೆ ಟ್ವಿಸ್ಟ್‌ ನೀಡುತ್ತ ಮುಂದೇನಾಗಲಿದೆ ಎಂಬ ಕುತೂಹಲ ಮೂಡಿಸುತ್ತ ಸಾಗುತ್ತಿದೆ ಈ ಸೀರಿಯಲ್‌. ಇದೀಗ ಟಿಆರ್‌ಪಿಯಲ್ಲಿಯೂ ಟಾಪ್‌ನಲ್ಲಿಯೇ ಸ್ಥಾನ ಪಡೆವ ಇದೇ ಧಾರಾವಾಹಿಯ ಪ್ರಮುಖ ಪಾತ್ರಧಾರಿಯೊಬ್ಬರು ಸೀರಿಯಲ್‌ನಿಂದ ಹೊರಬಂದಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

ಹೀಗೆ ಸಾಗುತ್ತಿರುವ ಸೀರಿಯಲ್‌ನಲ್ಲಿ ಇನ್ನೊಂದು ಪ್ರಮುಖ ಪಾತ್ರ ಕಾಣದೇ‌ ಕಳೆದ ಕೆಲ ತಿಂಗಳುಗಳೇ ಕಳೆದಿವೆ. ಲಕ್ಷ್ಮೀ ಮತ್ತು ಶ್ರೀನಿವಾಸ ದಂಪತಿಯ ಐವರು ಮಕ್ಕಳಲ್ಲಿ ಮಂಗಳಾ ಸಹ ಒಬ್ಬಳು. ಮದುವೆಯಾಗಿ ಗಂಡನ ಮನೆ ಸೇರಿದರೂ, ಹೆತ್ತವರ ಬಳಿ ಬಂದು ಹಣ ಕೇಳುವಂಥ ಪಾತ್ರವದು. ಆ ಮಂಗಳಾ ಪಾತ್ರಕ್ಕೆ ಗಂಡನಾಗಿ ನಟಿಸಿ...