ಭಾರತ, ಮೇ 8 -- Lakshmi Nivasa Serial: ಸೈಕೋ ಜಯಂತ್‌ನ ಅಸಲಿ ರೂಪದ ದರ್ಶನ ಪತ್ನಿ ಜಾಹ್ನವಿ ಗಮನಕ್ಕೂ ಬಂದಿದೆ. ಜಾನು ಫೋನ್‌ಅನ್ನು ಕದ್ದು ಮುಚ್ಚಿ ನೋಡಿದ ಬಳಿಕ ಗೂಬೆ ವಿಶ್ವನ ವಿಚಾರ ಜಯಂತನನ್ನು ಕೆರಳಿಸಿದೆ. ಅಷ್ಟಕ್ಕೇ ಸುಮ್ಮನಾಗದ ಜಯಂತ್‌, ಪತ್ನಿಗೆ ಮಂಡಿ ನೆಲಕ್ಕೆ ಕೂರಿಸಿ ಶಿಕ್ಷೆಯನ್ನೂ ನೀಡಿದ್ದಾರೆ. ಪತಿಯ ಈ ವರ್ತನೆ ಪತ್ನಿ ಜಾನುಗಡೆ ಅಸಹನೀಯ ಎನಿಸಿದೆ. ಆಕೆಯ ಮಾತನ್ನು ಒಪ್ಪದ ಜಯಂತ್‌, ಒಳಗೊಳಗೆ ಇವರಿಬ್ಬರ ನಡುವೆ ಏನೋ ನಡೀತಿದೆ ಎಂದು ಅನುಮಾನ ಪಟ್ಟಿದ್ದಾನೆ.

ಶಿಕ್ಷೆಯ ಬಳಿಕ ಮಗುವನ್ನು ಚಿವುಟಿ, ತೊಟ್ಟಿಲು ತೂಗುವುದು ಎಂಬಂತೆ, ಬೇಸರದಲ್ಲಿ ಮಲಗಿದ್ದವಳ ಮೊಣಕಾಲಿಗೆ ಶಾಖ ನೀಡಿದ್ದಾನೆ. ಗಾಬರಿಯಲ್ಲಿಯೇ ಎಚ್ಚರಗೊಂಡ ಜಾನು, ಬೆದರಿದ್ದಾಳೆ. ಈ ವೇಳೆ ನನ್ನದೂ ತಪ್ಪಾಯ್ತು ಕ್ಷಮಿಸಿ ಎಂದು ಟೀ ನೀಡಿ ಸಮಾಧಾನ ಮಾಡಿದ್ದಾನೆ. ಆಕೆಯನ್ನು ಸ್ನಾನಕ್ಕೂ ಕಳಿಸಿದ್ದಾನೆ. ಈ ವೇಳೆ ಅಲ್ಲೇ ಇದ್ದ ಆಕೆಯ ಫೋನ್‌ ನೋಡಿದ್ದಾನೆ. ಅದರಲ್ಲಿನ ಗೂಬೆ (ವಿಶ್ವ) ಜತೆಗಿನ ವಾಯ್ಸ್‌ ಚಾಟ್‌ ಅವನ ಗಮನಕ್ಕೆ ಬಂದಿದೆ. ತಕ್ಷಣ ಅವೆಲ್ಲವನ್ನು...