Bengaluru, ಮಾರ್ಚ್ 24 -- Lakshmi Nivasa Serial: ಜೀ ಕನ್ನಡದಲ್ಲಿ ಸೋಮವಾರದಿಂದ ಶುಕ್ರವಾರದ ವರೆಗೆ ರಾತ್ರಿ 8ಕ್ಕೆ ಲಕ್ಷ್ಮೀ ನಿವಾಸ ಧಾರಾವಾಹಿ ಪ್ರಸಾರವಾಗುತ್ತಿದೆ. ಒಂದು ಗಂಟೆಯ ಈ ಸೀರಿಯಲ್‌, ಹಲವು ಕವಲುಗಳಾಗಿ, ಐದಾರು ಕಥೆಗಳ ರೂಪದಲ್ಲಿ ಕಿರುತೆರೆ ವೀಕ್ಷಕರನ್ನು ಸೆಳೆಯುತ್ತಿದೆ. ರೋಚಕ ಟ್ವಿಸ್ಟ್‌ ಮೂಲಕ ಮುಂದೇನಾಗಲಿದೆ ಎಂಬ ಕುತೂಹಲಕ್ಕೂ ಒಗ್ಗರಣೆ ಹಾಕುತ್ತಿದೆ ಈ ಸೀರಿಯಲ್‌. ಈಗ ಅಚ್ಚರಿಯ ಬೆಳವಣಿಗೆಯಲ್ಲಿ ಇದೇ ಧಾರಾವಾಹಿಯ ಎರಡು ಜೋಡಿಗಳು ದೂರದ ಶ್ರೀಲಂಕಾಕ್ಕೆ ಹಾರಿವೆ. ಲಂಕಾ ಪ್ರವಾಸದಲ್ಲಿನ ವಿಶೇಷ ಪ್ರೋಮೋವನ್ನು ಜೀ ಕನ್ನಡ ತನ್ನ ಅಧಿಕೃತ ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿದೆ.

ಸಿದ್ಧೇಗೌಡ ಮತ್ತು ಭಾವನಾ, ಖುಷಿ ಖುಷಿಯಾಗಿ ಶ್ರೀಲಂಕಾ ಪ್ರವಾಸಕ್ಕೆ ಹೋಗಿದ್ದಾರೆ. ಮನೆಯವರೇ ಈ ಜೋಡಿಯನ್ನು ಹನಿಮೂನ್‌ಗೆಂದು ಕಳಿಸಿಕೊಟ್ಟಿದೆ. ಶ್ರೀಲಂಕಾದಲ್ಲಿ ಹೀಗೆ ಸುತ್ತಾಡುತ್ತಿರುವಾಗಲೇ, ಭಾವನಾ ಕೊರಳಿಲ್ಲನ ಮಾಂಗಲ್ಯ ಮಾಯವಾಗಿದೆ. ಆ ಮಾಂಗಲ್ಯದ ಸಲುವಾಗಿ, ಸೀತಾ ದೇವಿ ಬಳಿ ನಿಂತು ಬೇಡಿಕೊಂಡಿದ್ದಾಳೆ ಭಾವನಾ. ಅಷ್ಟೊ...