Bengaluru, ಫೆಬ್ರವರಿ 25 -- Lakshmi Nivasa Serial: ಜೀ ಕನ್ನಡದಲ್ಲಿ ಒಂದು ಗಂಟೆಯ ಏಪಿಸೋಡ್‌ ಮೂಲಕವೇ ಹೆಚ್ಚು ವೀಕ್ಷಕರನ್ನು ಹಿಡಿದಿಟ್ಟುಕೊಂಡಿದೆ ಲಕ್ಷ್ಮೀ ನಿವಾಸ ಸೀರಿಯಲ್.‌ ರೋಚಕ ಟ್ವಿಸ್ಟ್‌ಗಳು ಒಂದೆಡೆಯಾದರೆ, ಕವಲುಗಳಾಗಿ ತೆರೆದುಕೊಳ್ಳುವ ಹಲವು ಕಥೆಗಳೂ ಈ ಸೀರಿಯಲ್‌ನ ಹೈಲೈಟ್ಸ್‌. ಅದರಲ್ಲೂ ಸೈಕೋ ಜಯಂತನ ಲೀಲೆಗಳು ಕಿರುತೆರೆ ವೀಕ್ಷಕರ ಕಣ್ಣು ತೆರೆಸಿದ್ದವು. ಸೀರಿಯಲ್‌ ಶುರುವಾದಾಗ, ಜಯಂತನ ಪಾತ್ರಕ್ಕೆ ಕಟು ಟೀಕೆಗಳು ಮಾತ್ರವಲ್ಲದೆ, ಹೀಗೋ ಒಬ್ಬ ಮನುಷ್ಯ ಇರ್ತಾನಾ ಎಂದೂ ಕಾಮೆಂಟ್‌ ಬಂದಿದ್ದವು. ಇದೀಗ ಇದೇ ಸೈಕೋ ಜಯಂತನ ವರ್ತನೆ ಸ್ವತಃ ಪತ್ನಿಗೇ ಅತೀ ಎನಿಸುತ್ತಿದೆ.

ಲಕ್ಷ್ಮೀ ನಿವಾಸ ಸೀರಿಯಲ್‌ನಲ್ಲಿ ತನ್ನ ಪತ್ನಿ ಜಾನು ಮೇಲೆ ಅತಿಯಾದ ಕಾಳಜಿ ಮತ್ತು ಪ್ರೀತಿಯೇ ಜಯಂತನಿಗೆ ಇದೀಗ ಮುಳುವಾಗಿದೆ. ಕ್ಷಣ ಕ್ಷಣಕ್ಕೂ ಆಕೆಯ ನಡೆಯ ಮೇಲೆ ಹದ್ದಿನ ಕಣ್ಣಿಟ್ಟಿದ್ದ ಜಯಂತ್, ಜಾನು ಯಾರ ಜತೆ ಮಾತನಾಡ್ತಾಳೆ, ಯಾರ ಜತೆ ಇರ್ತಾಳೆ ಇದೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದ. ಇದಷ್ಟೇ ಅಲ್ಲ, ಅರಮನೆಯಂಥ ಮನೆಯಲ್ಲಿ ಒಬ್...