Bengaluru, ಮಾರ್ಚ್ 25 -- Lakshmi Narayana Yoga: ಜಾತಕದಲ್ಲಿ ಬುಧ ಮತ್ತು ಶುಕ್ರ ಒಂದೇ ಮನೆಯಲ್ಲಿದ್ದಾಗ ಲಕ್ಷ್ಮಿ ನಾರಾಯಣ ಯೋಗವು ರೂಪುಗೊಳ್ಳುತ್ತದೆ. ಶುಕ್ರನು ಸಂಪತ್ತು, ಭೌತಿಕ ಸಂತೋಷ ಹಾಗೂ ಸಮೃದ್ಧಿ ಕಾರಣವಾಗಿರುತ್ತಾನೆ. ಬುಧನು ಬುದ್ಧಿವಂತಿಕೆ, ವ್ಯವಹಾರ ಹಾಗೂ ಸಂಪತ್ತನ್ನು ಒದಗಿಸುತ್ತಾನೆ. ಇಂತಹ ಪರಿಸ್ಥಿತಿಯಲ್ಲಿ, ಈ ಎರಡು ಗ್ರಹಗಳು ಒಟ್ಟಿಗೆ ಸೇರಿದಾಗ ಲಕ್ಷ್ಮಿ ನಾರಾಯಣ ಯೋಗವು ಶ್ರೀಮಂತರನ್ನಾಗಿ ಮಾಡುತ್ತದೆ ಮತ್ತು ಸಮೃದ್ಧಿಯನ್ನು ತರುತ್ತದೆ. ಯಾರ ಜಾತಕದಲ್ಲಿ ಈ ಯೋಗವು ರೂಪುಗೊಂಡಿದೆಯೋ ಅವರು ಲಕ್ಷ್ಮಿ ದೇವಿಯ ವಿಶೇಷ ಆಶೀರ್ವಾದವನ್ನು ಪಡೆಯುತ್ತಾರೆ. ಪ್ರತಿಯೊಬ್ಬ ವ್ಯಕ್ತಿಯು ಈ ಯೋಗವನ್ನು ಪಡೆಯುವುದಿಲ್ಲ. ಕೆಲವು ವಿಶೇಷ ಪರಿಹಾರಗಳನ್ನು ಅನುಸರಿಸಿದರೆ, ಈ ಯೋಗವನ್ನು ಪಡೆಯಲು ಸಾಧ್ಯವಾಗುತ್ತದೆ.

ಜ್ಯೋತಿಷ್ಯ ತಜ್ಞರ ಪ್ರಕಾರ, ಇದು ಹೆಚ್ಚಾಗಿ ದೊಡ್ಡ ಉದ್ಯಮಿಗಳು ಮತ್ತು ಕೈಗಾರಿಕೋದ್ಯಮಿಗಳ ಜಾತಕದಲ್ಲಿ ಕಂಡುಬರುತ್ತದೆ. ನಿಮ್ಮ ಜೀವನದಲ್ಲಿ ಈ ಯೋಗವನ್ನು ಹೊಂದಲು ಮತ್ತು ಶುಭ ಪರಿಣಾಮವನ್ನು ಪಡೆಯಲು ನೀವು...