ಭಾರತ, ಫೆಬ್ರವರಿ 25 -- ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ವಿಧಿ ತುಂಬಾ ಬೇಸರದಲ್ಲಿದ್ದರೂ ಕೂಡ ದೊಡ್ಡ ನಿರ್ಧಾರ ತೆಗೆದುಕೊಂಡಿದ್ದಾಳೆ. ಕಾವೇರಿ ವಿಧಿ ಮದುವೆಗೆ ಒಪ್ಪದ ಕಾರಣ ಅವಳು ಸಾಮೂಹಿಕ ವಿವಾಹದಲ್ಲಿ ಮದುವೆ ಆಗುತ್ತೇನೆ ಎಂದು ಹಠ ಹಿಡಿದಿದ್ದಾಳೆ. ಆ ಕಾರಣಕ್ಕಾಗಿ ಕಾವೇರಿ ಇನ್ನಷ್ಟು ಕೋಪ ಮಾಡಿಕೊಂಡು ಮನೆಯಲ್ಲಿ ಕುಳಿತುಕೊಂಡಿದ್ದಾಳೆ. ಆದರೆ ಅಣ್ಣನಾಗಿ ತಾನು ಕರ್ತವ್ಯ ಮರೆಯಬಾರದು ಎಂದು ವೈಷ್ಣವ್ ಮದುವೆಗೆ ಹೊರಟಿದ್ದಾನೆ. ಇನ್ನು ಲಕ್ಷ್ಮೀ ಕೂಡ ಅವನ ಜತೆ ಹೋಗುತ್ತಿದ್ದಾಳೆ. ಕಾರಿನಲ್ಲಿ ಮದುವೆಗೆ ಹೊರಟಿದ್ದಾಳೆ.

ವಿಧಿ ಅಂದವಾಗಿ ರೆಡಿಯಾಗುತ್ತಾ ತನ್ನ ಮದುವೆಗಾಗಿ ಕಾಯುತ್ತಾ ಇದ್ದಾಳೆ. "ನಾನು ಅಮ್ಮನಿಗೆ ಬುದ್ದಿ ಕಲಿಸಬೇಕು ಎಂದು ಈ ಮದುವೆ ಮಾಡಿಕೊಳ್ಳುತ್ತಿದ್ದೇನೆ" ಎನ್ನುತ್ತಾ ಸಿಂಗಾರಗೊಳ್ಳುತ್ತಿದ್ದಾಳೆ. ಆದರೆ ಇತ್ತ ನಡೆಯುತ್ತಿರುವುದೇ ಬೇರೆ. ವೈಷ್ಣವ್ ಹಾಗೂ ಲಕ್ಷ್ಮೀ ಬರುತ್ತಿರುವ ಕಾರಿಗೆ ಆಕ್ಸಿಡೆಂಟ್‌ ಆಗುತ್ತದೆ. ಅಲ್ಲಿ ನೋಡಿದರೆ ಒಂದು ಸ್ಕೂಟರ್ ಅಡ್ಡ ಬಂದಿರುತ್ತದೆ. ಸ್ಕೂಟರ್‍‌ನಲ್ಲಿ ಬಂದವನಿಗೆ ಗಾಯ ಆ...