ಭಾರತ, ಫೆಬ್ರವರಿ 28 -- Lakshmi Baramma Serial: ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ವಿಧಿ ತನಗಾದ ನೋವನ್ನು ತನ್ನ ತಾಯಿ ಬಳಿ ಹೇಳಿಕೊಳ್ಳಬೇಕು ಎಂದು ಅಂದುಕೊಂಡಿದ್ದಾಳೆ. ಆದರೆ ದಾರಿ ಮಧ್ಯದಲ್ಲಿ ನುಡಿಗಾರ ಸಿಕ್ಕ ಕಾರಣ ಕಾವೇರಿ ತನ್ನ ಫೋನ್‌ಅನ್ನು ಹಾಗೇ ಬಿಟ್ಟು ಅವನೊಟ್ಟಿಗೆ ಮಾತಿಗಿಳಿಯುತ್ತಾಳೆ. ನುಡಿಗಾರ ಎಂದರೆ ಬೊಂಬೆ ಆಡಿಸುವವನು, ಅವನು ಆಗಾಗ ಲಕ್ಷ್ಮೀ ಹಾಗೂ ಕಾವೇರಿಗೆ ಸಿಕ್ಕು ಎಚ್ಚರಿಕೆ ಮಾತುಗಳನ್ನಾಡುತ್ತಾ ಇರುತ್ತಾನೆ. ಈಗಲೂ ಹಾಗೇ ಆಗಿದೆ. ಕಾವೇರಿಗೆ ಮತ್ತೆ ನುಡಿಗಾರ ಸಿಕ್ಕಿದ್ದಾನೆ. ಕಾವೇರಿ ಮಾಡುತ್ತಿರುವುದು ತಪ್ಪು ಎಂದು ಪದೇ ಪದೇ ಎಚ್ಚರಿಸುತ್ತಲೇ ಇದ್ದಾನೆ.

ಕಾವೇರಿ ಮಾತ್ರ ಅವನ ಮಾತು ಕೇಳುತ್ತಿಲ್ಲ. ತಾನು ಮಾಡುವುದೇ ಸರಿ ಎಂದು ವಾದ ಮಾಡುತ್ತಿದ್ದಾಳೆ. ಇತ್ತ ವಿಧಿ ಅಮ್ಮ ಕಾಲ್‌ನಲ್ಲಿ ತನ್ನ ಮಾತುಗಳನ್ನು ಕೇಳಿಸಿಕೊಳ್ಳುತ್ತಾ ಇದ್ದಾಳೆ ಎಂದು ಭಾವನಾತ್ಮಕವಾಗಿ ಮಾತಾಡುತ್ತಾ ಇದ್ದಾಳೆ. ನೀನು ಯಾಕೆ ನನ್ನ ದೂರ ಮಾಡಿದ್ದೀಯಾ? ನನ್ನ ಮದುವೆಗೂ ಕೂಡ ನೀನು ಬಂದಿಲ್ಲ. ನೀನು ಕಾಳಜಿ ಮಾಡುತ್ತಿಲ್ಲ ಎಂದು ನನ...