ಭಾರತ, ಮಾರ್ಚ್ 24 -- ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ವೈಷ್ಣವ್ ಈಗ ವಿಧಿ ಪರ ನಿಂತಿದ್ದಾನೆ, ವಿಧಿಗೆ ತನ್ನ ತಾಯಿ ನ್ಯಾಯ ಒದಗಿಸಿಲ್ಲ ಎನ್ನುವುದು ಅವನಿಗೆ ಅರ್ಥವಾಗಿದೆ.

ಕಾವೇರಿಯ ಹಠದಿಂದಾಗಿ ಸಾಕಷ್ಟು ತೊಂದರೆಯನ್ನು ವೈಷ್ಣವ್ ಹಾಗೂ ವಿಧಿ ಇಬ್ಬರೂ ಅನುಭವಿಸಿದ್ದಾರೆ.

ಆ ಕಾರಣಕ್ಕಾಗಿ ವೈಷ್ಣವ್ ಈ ಬಾರಿ ತಾನೇ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಕಾವೇರಿ ಮಾತನ್ನು ನಿರಾಕರಿಸಿಕೊಂಡು ಹೋಗಿದ್ದಾನೆ.

ಲಕ್ಷ್ಮೀ ಜತೆಗೂಡಿಕೊಂಡು ತಾನು ವಿಧಿ ಮನೆಗೆ ಹೋಗುತ್ತೇನೆ ಎಂದು ಹೇಳಿರುತ್ತಾನೆ. ಆದರೆ, ಕಾವೇರಿ ಅವನನ್ನು ಅಡ್ಡಗಟ್ಟುತ್ತಾಳೆ.

ಇನ್ನೆರಡು ದಿನದಲ್ಲಿ ವೈಷ್ಣವ್ ನಿಶ್ಚಿತಾರ್ಥ ಇದೆ ಎಂದು ಹೇಳುತ್ತಾಳೆ. ಆಗ ಮನೆಯವರಿಗೆ ಹುಡುಗಿ ಯಾರು ಎಂಬ ಪ್ರಶ್ನೆ ಮೂಡುತ್ತದೆ.

ಅಷ್ಟರಲ್ಲಿ ಕಾರಿನಿಂದ ವೈಷ್ಣವ್‌ನನ್ನು ಮದುವೆಯಾಗಲಿರುವ ಹುಡುಗಿ ಇಳಿದು ಬಂದಿದ್ದಾಳೆ. ವೈಷ್ಣವ್ ಬಾಳಸಂಗಾತಿಯಾಗಿ ಈಗ ಮತ್ತೊಂದು ಹುಡುಗಿ ಬರುವ ಲಕ್ಷಣ ಇದೆ.

ವೈಷ್ಣವ್‌ಗಾಗಿ ಕಾಯುತ್ತಿದ್ದ ಲಕ್ಷ್ಮೀ ಹಾಗೂ ಕೀರ್ತಿಯ ನಡುವಿಂದ ನುಸುಳಿಕೊಂಡು ಹೊಸ ಹುಡುಗಿ...