ಭಾರತ, ಮಾರ್ಚ್ 23 -- ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಲಕ್ಷ್ಮೀ ಮತ್ತು ವೈಷ್ಣವ್ ಇಬ್ಬರೂ ಒಂದಾಗುವ ಸಮಯ ಬಂದಿದೆ. ವೈಷ್ಣವ್ ಇಷ್ಟು ದಿನ ಲಕ್ಷ್ಮೀಯನ್ನು ದೂರ ಇಟ್ಟಿದ್ದ ಆದರೆ, ಈಗ ಮತ್ತೆ ಒಂದಾಗುವ ಲಕ್ಷಣ ಇದೆ. ಕಾವೇರಿ ಎಷ್ಟೇ ಪ್ರಯತ್ನ ಮಾಡಿದರೂ ವೈಷ್ಣವ್ ಹಾಗೂ ಲಕ್ಷ್ಮೀಯನ್ನು ದೂರ ಮಾಡಲು ಆಗುತ್ತಿಲ್ಲ. ಲಕ್ಷ್ಮೀ ಜೀವನದಿಂದ ಹೊರ ಹೋಗಿದ್ದ ನಿತಿನ್ ಮತ್ತೆ ಅವಳ ಜೀವನದಲ್ಲಿ ಬಂದಿದ್ದ. ಆದರೆ ವೈಷ್ಣವ್ ತಾನೇ ಹೋಗಿ ಲಕ್ಷ್ಮೀಯನ್ನು ಕಾಪಾಡಿದ್ದಾನೆ. "ನೀನು ಸತ್ತರೂ ತೊಂದರೆ ಇಲ್ಲ ನಿನ್ನ ಹೆಣಕ್ಕಾದರೂ ನಾನು ತಾಳಿ ಕಟ್ಟೇ ಕಟ್ಟುತ್ತೇನೆ" ಎಂದು ನಿತಿನ್, ಲಕ್ಷ್ಮೀ ಹತ್ತಿರ ಹೇಳಿದ್ದ. ಆ ಮಾತನ್ನು ವೈಷ್ಣವ್ ಕೇಳಿಸಿಕೊಂಡಿರುತ್ತಾನೆ.

ನಿತಿನ್ ಲಕ್ಷ್ಮೀಗೆ ತುಂಬಾ ತೊಂದರೆ ಕೊಡುವುದನ್ನು ನೋಡಲಾಗದೆ ವೈಷ್ಣವ್ ತಾನೇ ಬಂದು ಅವಳನ್ನು ಕಾಪಾಡಿದ್ದಾನೆ. ನಿತಿನ್ ಏಕಾಏಕಿ ಕೈಯ್ಯಲ್ಲಿ ತಾಳಿ ಹಿಡಿದುಕೊಂಡು ಬಂದು ಲಕ್ಷ್ಮೀಯನ್ನು ನಿಂತ ಜಾಗದಲ್ಲೇ ಮದುವೆ ಆಗುತ್ತೇನೆ ಎಂದು ಹಠ ಮಾಡುತ್ತಾನೆ. ಆ ಮಾತನ್ನು ಕೇಳಿ ಲಕ್ಷ್ಮೀ ಕಂಗಾಲಾಗಿರು...