ಭಾರತ, ಮಾರ್ಚ್ 18 -- ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಲಕ್ಷ್ಮೀ ಹಾಗೂ ವೈಷ್ಣವ್ ಇಬ್ಬರೂ ಬೇರೆಯಾಗಿದ್ದಾರೆ ಎನ್ನುವ ವಿಚಾರ ಒಬ್ಬರಿಂದ ಒಬ್ಬರಿಗೆ ಹರಡುತ್ತಿದೆ. ಇದರಿಂದ ಲಕ್ಷ್ಮೀಗೆ ನಾನಾ ರೀತಿಯ ತೊಂದರೆ ಆಗುತ್ತಿದೆ. ಆದರೆ, ಆ ತೊಂದರೆಯನ್ನು ಹೇಗೆ ನಿಭಾಯಿಸುವುದು ಎಂದು ಲಕ್ಷ್ಮೀಗೆ ತಿಳಿಯುತ್ತಿಲ್ಲ. ವೈಷ್ಣವ್ ಮನೆಯಿಂದ ಆಚೆ ಹಾಕಿದ್ದರೂ ಲಕ್ಷ್ಮೀ ಭರವಸೆಯೊಂದಿಗೆ ಬದುಕುತ್ತಿದ್ದಾಳೆ. ಇಂದಲ್ಲ ನಾಳೆ ಮತ್ತೆ ನಾನು ಹಾಗೂ ವೈಷ್ಣವ್ ಒಂದಾಗುತ್ತೇವೆ ಎಂಬ ಮನೋಭಾವ ಅವಳಲ್ಲಿದೆ. ಅದೇ ಕಾರಣಕ್ಕೆ ಲಕ್ಷ್ಮೀ ಸುಮ್ಮನಿದ್ದಾಳೆ. ಆದರೆ, ಸುಮ್ಮನಿದ್ದರೂ ಅವಳಿಗೆ ತೊಂದರೆ ಕೊಡಲು ಒಬ್ಬರಲ್ಲ, ಒಬ್ಬರು ಕಾದಿರುತ್ತಾರೆ ಎಂಬುದಕ್ಕೆ ಮಿಥುನ್ ಸಾಕ್ಷಿ.

ಮಿಥುನ್ ಈ ಹಿಂದೆಯೂ ಲಕ್ಷ್ಮೀಗೆ ಸಾಕಷ್ಟು ಬಾರಿ ತೊಂದರೆ ಕೊಟ್ಟಿದ್ದ. ಅವನಿಗೆ ಲಕ್ಷ್ಮೀ ಇಷ್ಟ ಎಂಬ ಕಾರಣಕ್ಕೆ, ಅವಳಿಗೆ ಮದುವೆ ಆದರೂ ಅವನು ಲಕ್ಷ್ಮೀಯೇ ಬೇಕು ಎಂದು ಹಠ ಮಾಡಿದ್ದ. ಆಗ ಅವನ ಕೆನ್ನೆಗೆ ಲಕ್ಷ್ಮೀ ಚಪ್ಪಲಿಯಿಂದ ಬಾರಿಸಿ ಬುದ್ಧಿ ಕಲಿಸಿದ್ದಳು. ಆದರೂ, ಬುದ್ಧಿ ಕಲಿಯದ ಮಿಥ...