ಭಾರತ, ಫೆಬ್ರವರಿ 26 -- ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ವೈಷ್ಣವ್ ಹಾಗೂ ಲಕ್ಷ್ಮೀ ಇಬ್ಬರೂ ವಿಧಿ ಮದುವೆಗೆ ಹೊರಟಿರುತ್ತಾರೆ. ಆದರೆ, ದಾರಿ ಮಧ್ಯದಲ್ಲಿ ಆಕ್ಸಿಡೆಂಟ್‌ ಆಗಿದೆ. ಆಕ್ಸಿಡೆಂಟ್‌ ಆಗಿರುವುದು ವೈಷ್ಣವ್ ಹಾಗೂ ವಿಧಿಯನ್ನು ಮದುವೆ ಆಗುವ ಹುಡುಗನಿಗೆ. ವೈಷ್ಣವ್‌ ಕಾರಿನಲ್ಲಿರುವ ಕಾರಣ ಹೆಚ್ಚೇನು ತೊಂದರೆ ಆಗಿಲ್ಲ. ಆದರೆ ವಿಧಿಯನ್ನು ಮದುವೆಯಾಗುವ ಹುಡುಗನಿಗೆ ಪೆಟ್ಟಾಗಿದೆ. ಅವನಿಗೆ ಮಾತಾಡಲೂ ಆಗುತ್ತಿಲ್ಲ. ಆ ಕಾರಣದಿಂದ ವೈಷ್ಣವ್ ಕೊಂಚ ಗಾಬರಿಯಾಗಿದ್ದಾನೆ. ಆಕ್ಸಿಡೆಂಟ್‌ ಆಗಿರುವುದು ವಿಧಿ ಮದುವೆಯಾಗುತ್ತಿರುವ ಹುಡುಗನಿಗೆ ಎಂಬುದು ಅವನಿಗೆ ಗೊತ್ತಿಲ್ಲ. ಆದರೆ, ಈ ವಿಚಾರ ಲಕ್ಷ್ಮೀಗೆ ಗೊತ್ತಿದೆ. ಅವಳು ಸಾಕಷ್ಟು ಬಾರಿ ಅವನ ವಿಚಾರವನ್ನು ವೈಷ್ಣವ್ ಹತ್ತಿರ ಹೇಳಬೇಕು ಎಂದು ಪ್ರಯತ್ನಪಡುತ್ತಾಳೆ. ಆದರೆ ಸಾಧ್ಯವಾಗುವುದಿಲ್ಲ. ಅವಳು ಎಷ್ಟು ಬಾರಿ ತನ್ನ ಆ ವಿಚಾರ ಹೇಳಬೇಕು ಎಂದುಕೊಂಡಿದ್ದಾಳೋ, ಅಷ್ಟೂ ಸಲ ವೈಷ್ಣವ್ ಕೋಪದಿಂದ ಉತ್ತರಿಸಿದ್ದಾನೆ.

"ನಾನು ನನ್ನದೇ ಆದ ತಲೆಬಿಸಿಯಲ್ಲಿದ್ದರೆ ನಿಮಗೆ ಮಾತಾಡುವ ಹುಚ್ಚು. ನ...