ಭಾರತ, ಫೆಬ್ರವರಿ 12 -- Lakshmi Baramma Serial: ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಲಕ್ಷ್ಮೀ ಹಾಗೂ ವೈಷ್ಣವ್ ಇಬ್ಬರೂ ಬೇರೆಯಾಗಬೇಕು ಎಂದು ಕಾವೇರಿ ಸಾಕಷ್ಟು ಪ್ರಯತ್ನಪಟ್ಟಿದ್ದಾಳೆ. ಆ ಎಲ್ಲ ಪ್ರಯತ್ನಗಳಿಗೂ ಪ್ರತಿಫಲ ಸಿಕ್ಕಿದೆ. ಲಕ್ಷ್ಮೀ ಹಾಗೂ ವೈಷ್ಣವ್ ಈಗ ಬೇರೆ ಬೇರೆ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ. ಅಂಕಿತ್ ಹಾಗೂ ಕೀರ್ತಿ ಇಬ್ಬರೂ ಉಪಾಯ ಮಾಡಿ ಅವರಿಬ್ಬರನ್ನು ಮತ್ತೆ ಒಂದು ಮಾಡಬೇಕು ಎಂದುಕೊಂಡಿದ್ದಾರೆ. ಆದರೆ ಅದು ಸಾಧ್ಯವಾಗುತ್ತಿಲ್ಲ. ಲಕ್ಷ್ಮೀ ಹಾಗೂ ವೈಷ್ಣವ್ ಮಾತಾಡುತ್ತಾ ಇರುವ ಸಂದರ್ಭದಲ್ಲಿ ಕೀರ್ತಿ ವೈಷ್ಣವ್ ಮನೆ ಪ್ರವೇಶ ಮಾಡಿದ್ದಾಳೆ. ಅಷ್ಟೇ ಅಲ್ಲ ಕಾವೇರಿ ಕೋಣೆಗೆ ಹೋಗಿ ಕಾವೇರಿಯನ್ನು ಕೊಲ್ಲುವ ಯತ್ನ ಮಾಡಿದ್ದಾಳೆ. ಇದರಿಂದಾಗಿ ವೈಷ್ಣವ್‌ಗೆ ಕೋಪ ಬಂದಿದೆ.

ಕಾರುಣ್ಯ ಮತ್ತು ಲಕ್ಷ್ಮೀ ಇಬ್ಬರೂ ಮನೆಯ ಹೊರಗಡೆ ಮಾತಾಡುತ್ತಾ ಇರುವ ಸಂದರ್ಭದಲ್ಲಿ ಅಲ್ಲಿಗೆ ವೈಷ್ಣವ್ ಬರುತ್ತಾನೆ. ತಾನು ಬರುವಾಗಲೇ ತನ್ನ ಕೈಗಳಿಂದ ಕೀರ್ತಿ ಕೈ ಹಿಡಿದುಕೊಂಡು ಎಳೆದುಕೊಂಡು ಬಂದಿರುತ್ತಾನೆ. ಅವನು ಕೀರ್ತಿಯನ್ನು ಆ ರೀತಿ...