ಭಾರತ, ಮಾರ್ಚ್ 16 -- Lakshmi Baramma Serial: ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ವೈಷ್ಣವ್ ಇಷ್ಟು ದಿನ ಸುಮ್ಮನೆ ಇದ್ದು ಈಗ ಎಲ್ಲ ಮೀರಿ ಹೋದ ನಂತರ ಯಾವುದು ತಪ್ಪು? ಯಾವುದು ಸರಿ? ಎಂದು ಪ್ರಶ್ನೆ ಮಾಡಿಕೊಳ್ಳುತ್ತಾ ಅದಕ್ಕೆ ಉತ್ತರ ಕಂಡುಕೊಳ್ಳುತ್ತಿದ್ದಾನೆ. ಕಾವೇರಿ ಅಥವಾ ಲಕ್ಷ್ಮೀ ಇಬ್ಬರಲ್ಲಿ ತಾನು ಯಾರನ್ನು ನಂಬಬೇಕು ಎಂದು ಅವನಿಗೆ ಅರ್ಥ ಆಗುತ್ತಿಲ್ಲ. ಕಾವೇರಿಯಂತು ತನ್ನ ಕುತಂತ್ರದಿಂದ ಲಕ್ಷ್ಮೀಯನ್ನು ಮನೆಯಿಂದಾಚೆ ಹಾಕಿದ್ದಾಳೆ. ಅವಳು ಮಾಡಿದ ಕೆಲಸ ನೋಡಿ ಸುಪ್ರಿತಾ ಹಾಗೂ ಮನೆಯಲ್ಲಿರುವ ಎಲ್ಲರಿಗೂ ಬೇಸರ ಆಗಿದೆ. ವೈಷ್ಣವ್ ಮಾತ್ರ ಕಾವೇರಿ ಹೇಳಿದ್ದೆಲ್ಲದಕ್ಕೂ ಹೂ ಹಾಕುತ್ತಾ ಬದುಕುತ್ತಿದ್ದಾನೆ. ಈಗ ಅವನಿಗೂ ತನ್ನ ನಿರ್ಧಾರ ಸರಿಯೇ ಅಥವಾ ತಪ್ಪೇ? ಎಂದು ಆಲೋಚನೆ ಮಾಡುವ ದಿನ ಎದುರಾಗಿದೆ.

ಇಷ್ಟು ದಿನ ಏನೆಲ್ಲ ಆಯ್ತು ಎನ್ನುವುದನ್ನು ವಿಚಾರ ಮಾಡುತ್ತಾ ಕುಳಿತಿದ್ದಾನೆ. ಒಂದೆಡೆ ಅಮ್ಮ, ಇನ್ನೊಂದೆಡೆ ಹೆಂಡತಿ ಇಬ್ಬರೂ ಅವನಿಗೆ ಅವನಿಗೆ ಬೇಕು. ಆದರೆ, ಈಗ ಆಯ್ಕೆ ಹಾಗಿಲ್ಲ. ಅಮ್ಮ ಅಥವಾ ಹೆಂಡತಿ ಇಬ್ಬರಲ್ಲಿ ಒಬ್ಬರ...