ಭಾರತ, ಮಾರ್ಚ್ 11 -- ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ವಿಧಿ ಮದುವೆ ಆಗಿದೆ. ಆದರೆ ಈ ಮದುವೆ ಮನೆಯವರಿಗೆ ಇಷ್ಟ ಆಗಿಲ್ಲ. ವಿಧಿ ನಡೆದುಕೊಂಡ ರೀತಿ ಕೂಡ ಕಾವೇರಿ ಹಾಗೂ ಕೃಷ್ಣನಿಗೆ ಬೇಸರ ತಂದಿದೆ. ವೈಷ್ಣವ್‌ಗೆ ಹತ್ತಾರು ಜನರ ನಡುವೆ ಅವಮಾನ ಆಗಿದೆ. ಆದರೂ ವಿಧಿ ಮದುವೆ ಆಗಿದ್ದಾಳೆ. ಲಕ್ಷ್ಮೀ ಈ ಮದುವೆಗೆ ಕಾರಣ ಎನ್ನುವ ರೀತಿ ಕಾವೇರಿ ಮಾತು ಬದಲಾಯಿಸಿದ್ದಾಳೆ. ವಿಧಿ ಪ್ರೀತಿ ಮಾಡುತ್ತಿರುವ ವಿಚಾರ ಲಕ್ಷ್ಮೀಗೆ ಮೊದಲೇ ಗೊತ್ತಿತ್ತು, ವಿಕ್ಕಿ ಯಾರು ಎನ್ನುವುದು ಸಹ ಗೊತ್ತಿದ್ದು ಎಂದು ಕಾವೇರಿ ವೈಷ್ಣವ್ ಎದುರಲ್ಲಿ ಬೇಕೆಂದೇ ಹೇಳಿದ್ದಾಳೆ.

ಅದನ್ನು ಕೇಳಿ ವೈಷ್ಣವ್‌ಗೆ ಕೋಪ ಬಂದಿದೆ. ಈ ಬಗ್ಗೆ ಯಾವುದೇ ವಿಷಯವನ್ನು ಲಕ್ಷ್ಮೀ ತನ್ನ ಜತೆ ಹಂಚಿಕೊಂಡಿಲ್ಲ ಎಂದು ಅವನು ಕೋಪ ಮಾಡಿಕೊಂಡಿದ್ದಾನೆ. ತನ್ನ ತಂಗಿಯ ಮದುವೆಯನ್ನು ಒಳ್ಳೆ ರೀತಿಯಲ್ಲಿ ಅದ್ದೂರಿಯಾಗಿ ಮಾಡಬೇಕು ಎಂಬ ಆಸೆಯನ್ನು ಅವನು ಹೊಂದಿದ್ದ. ಅದೂ ಅಲ್ಲದೆ ವಿಧಿ ಇನ್ನೂ ಚಿಕ್ಕವಳು, ಕಾಲೇಜಿಗೆ ಹೋಗಿ ಓದುತ್ತಿರುವವಳು ಅವಳು ಈ ನಿರ್ಧಾರಕ್ಕೆ ಬರಲು ಕಾರಣ ಲಕ್ಷ್ಮೀನೇ ಇರಬಹು...