ಭಾರತ, ಮಾರ್ಚ್ 23 -- ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಜೈಲಿಗೆ ಹೋಗಿ ಬಂದರೂ ಕಾವೇರಿಯ ದರ್ಪ ಮಾತ್ರ ಒಂದಿಷ್ಟೂ ಕಡಿಮೆ ಆಗಿಲ್ಲ.

ವಿಧಿ ತನ್ನ ಗಂಡನನ್ನು ಕರೆದುಕೊಂಡು ಮೊದಲ ಬಾರಿಗೆ ಮನೆಗೆ ಬಂದಿದ್ದಾಳೆ. ಆಗಲೂ ಕಾವೇರಿ ಇಲ್ಲ ಸಲ್ಲದ ನಾಟಕ ಮಾಡಿದ್ದಾಳೆ.

ಮನೆಯ ಬಾಗಿಲಿಗೆ ಬಂದು ನಿಂತ ವಿಧಿಯನ್ನು ಕಾವೇರಿ ಅವಮಾನಿಸಿದ್ದಾಳೆ. ವಿಧಿ ಕೈ ಹಿಡಿದುಕೊಂಡು ಬಂದು ಮನೆಯ ಹೊರಗಡೆ ನಿಲ್ಲಿಸಿದ್ದಾಳೆ.

ಯಾರನ್ನೂ ಕೇಳದೆ, ಯಾರ ಮಾತಿಗೂ ಬೆಲೆ ಕೊಡದೆ ಮದುವೆ ಆದ ಕಾರಣಕ್ಕಾಗಿ ವಿಧಿಗೆ ಬೈದಿದ್ದಾಳೆ.

ಮನೆಯವರೆಲ್ಲರ ಮುಂದೆ ವಿಧಿಗೆ ಅವಮಾನ ಮಾಡಿದ್ದಾಳೆ. ಎಲ್ಲರೂ ಈ ವಿಚಾರವಾಗಿ ಬೇಸರ ಮಾಡಿಕೊಂಡಿದ್ದಾರೆ.

ಸುಪ್ರಿತಾ ಹಾಗೂ ಅಜ್ಜಿ ಇಬ್ಬರೂ ಕಾವೇರಿಯ ಹುಚ್ಚಾಟ ನೋಡಿ ಇನ್ನಷ್ಟು ನೊಂದುಕೊಂಡಿದ್ದಾರೆ. ಇವರಿಬ್ಬರಿಗೆ ವಿಧಿ ಮನಸಿನ ಭಾವನೆ ಅರ್ಥವಾಗಿದೆ.

ವಿಧಿ ಹತ್ತಿರ ಇಲ್ಲಿಂದ ಹೋಗು ಎಂದಾಗ ವಿಧಿ ತಾನು ಸಾಯುತ್ತೇನೆ ಎಂದು ಹೇಳಿದ್ಧಾಳೆ. ಆದರೆ, ಕಾವೇರಿ ಮಾತ್ರ ಆ ಮಾತಿಗೂ ಲೆಕ್ಕಿಸದೆ ವಿಧಿಯನ್ನು ಹೋಗಲು ಬಿಟ್ಟಿದ್ದಾಳೆ.

ಇನ್ನು ಇತ್ತ...