ಭಾರತ, ಮಾರ್ಚ್ 4 -- Lakshmi Baramma Serial: ವೈಷ್ಣವ್ ಮತ್ತು ಲಕ್ಷ್ಮೀ ಇಬ್ಬರೂ ಸಾಮೂಹಿಕ ವಿವಾಹಕ್ಕೆ ಹೋಗಿದ್ದಾರೆ. ಆದರೆ, ಅಲ್ಲಿ ಮದುವೆಯಾಗಲು ಬಂದ ಜೋಡಿಗಳಿಗೆ ಇವರೇ ತಾಳಿ ಮಾಡಿ ಕೊಡಬೇಕಾಗಿರುತ್ತದೆ. ಅಂದರೆ ಅಲ್ಲಿಟ್ಟ ದಾರಗಳಿಗೆ ಅರಶಿನ ಹಾಕಿ ಅದಕ್ಕೆ ತಾಳಿ ಪೋಣಿಸಿ ತಮ್ಮ ಕೈಯ್ಯಾರೆ ಅವುಗಳನ್ನು ನವ ಜೋಡಿಗಳಿಗೆ ಕೊಡಬೇಕಾಗಿರುತ್ತದೆ. ಮಂಗಳಮ್ಮ ಎನ್ನುವವರು ವೈಷ್ಣವ್ ಮತ್ತು ಲಕ್ಷ್ಮೀ ಕೈಯ್ಯಲ್ಲೇ ಈ ಕೆಲಸ ಮಾಡಿಸಬೇಕು ಎಂದು ಅಂದುಕೊಂಡಿರುತ್ತಾರೆ. ಅದೇ ರೀತಿ ವೈಷ್ಣವ್ ಮತ್ತು ಲಕ್ಷ್ಮೀ ಕೈಯ್ಯಲ್ಲೇ ಆ ಕೆಲಸವನ್ನು ಮಾಡಿಸುತ್ತಾರೆ. ಈ ಹಿಂದೆ ಕೀರ್ತಿ ಲಕ್ಷ್ಮೀ ಮತ್ತು ವೈಷ್ಣವ್ ಮದುವೆ ಆಗುವ ಸಂದರ್ಭದಲ್ಲಿ ತಾಳಿ ತನಗೆ ಬೇಕು ಎಂದು ಹಠ ಮಾಡಿದ ವಿಚಾರ ಆ ಸಂದರ್ಭದಲ್ಲಿ ಲಕ್ಷ್ಮೀಗೆ ನೆನಪಾಗುತ್ತದೆ.

ವೈಷ್ಣವ್ ಮತ್ತು ಲಕ್ಷ್ಮೀ ಮದುವೆ ಆಗುವ ಸಂದರ್ಭದಲ್ಲಿ ಭಾಗ್ಯಾ ಇದೇ ರೀತಿ ಅರಶಿನದ ಕೊಂಬನ್ನು ಅರಶಿನದ ದಾರಕ್ಕೆ ಗಂಟು ಹಾಕಿ ತಾಳಿ ಮಾಡಿಕೊಟ್ಟಿದ್ದಳು. ಅದೇ ರೀತಿ ಈಗ ಲಕ್ಷ್ಮೀ ತನ್ನ ಕೈಯ್ಯಾರೆ ಸಾಕಷ್ಟು ಜನರಿಗೆ ಅರಶ...