ಭಾರತ, ಫೆಬ್ರವರಿ 16 -- ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಲಕ್ಷ್ಮೀ ತನ್ನ ಪತಿ ವೈಷ್ಣವ್‌ನನ್ನು ಬಿಟ್ಟು ದೂರ ಬಂದಿದ್ದಾಳೆ. ಆದರೆ ಇದೆಲ್ಲವೂ ಕಾವೇರಿಯ ಕುತಂತ್ರ ಆಗಿರುತ್ತದೆ. ಕಾವೇರಿ ತನ್ನ ಮಗ ಹಾಗೂ ಸೊಸೆ ಇಬ್ಬರೂ ದೂರವಾಗಲಿ ಎಂದು ಬಯಸಿರುತ್ತಾಳೆ. ಅದರಂತೆಯೇ ಅವರಿಬ್ಬರೂ ದೂರವಾಗಲು ಏನೆಲ್ಲ ಬೇಕೋ ಅದೆಲ್ಲವನ್ನೂ ಮಾಡಿರುತ್ತಾಳೆ. ಹಾಗಾಗಿ ಇಂದು ಲಕ್ಷ್ಮೀ ಕೀರ್ತಿ ಮನೆಯಲ್ಲಿ ವಾಸ ಮಾಡುತ್ತಿದ್ದಾಳೆ. ಕೀರ್ತಿಗೆ ಹಳೆಯದೆಲ್ಲವೂ ಮರೆತು ಹೋಗಿರುವ ಕಾರಣ ಅವಳು ಚಿಕ್ಕ ಮಕ್ಕಳಂತೆ ವರ್ತನೆ ಮಾಡುತ್ತಿದ್ದಾಳೆ. ಕೀರ್ತಿ ತಾಯಿ ಕಾರುಣ್ಯ ಆಗಲಿ, ನನ್ನ ಮಗಳು ಇಷ್ಟಾದರೂ ಜೀವಂತ ಉಳಿದಿದ್ದಾಳಲ್ಲ ಎಂದು ಸಮಾಧಾನ ಮಾಡಿಕೊಂಡಿದ್ದಾಳೆ.

ಹೀಗಿರುವಾಗ ಕೀರ್ತಿ ತನ್ನ ಮನೆಯ ಗಾರ್ಡನ್‌ನಲ್ಲಿ ಮಣ್ಣಿನ ಮನೆಯೊಂದನ್ನು ನಿರ್ಮಾಣ ಮಾಡುತ್ತಾ ಇರುತ್ತಾಳೆ. ಆದರೆ ಎಷ್ಟು ಪ್ರಯತ್ನಿಸಿದರೂ ಆ ಮನೆಗೆ ಮೇಲ್ಚಾವಣಿ ಮಾಡಲು ಅವಳ ಬಳಿ ಸಾಧ್ಯ ಆಗೋದಿಲ್ಲ. ಹೀಗಿರುವಾಗ ಒಬ್ಬಳೇ ಬೇಸರದಿಂದ ಆ ಮನೆಯನ್ನು ಕಟ್ಟಲು ಪ್ರಯತ್ನಿಸುತ್ತಾ ವಿಫಲವಾಗಿರುತ್ತಾಳೆ. ಅದೇ ...