ಭಾರತ, ಮಾರ್ಚ್ 20 -- ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕಾವೇರಿ ವಿಧಿ ಮೇಲೆ ಕೋಪ ಮಾಡಿಕೊಂಡಿದ್ದಾಳೆ. ಸಾಮೂಹಿಕ ವಿವಾಹದಲ್ಲಿ ತಾನು ಪ್ರೀತಿಸಿದ ಹುಡುಗನನ್ನು ಅವಳು ಮದುವೆ ಆಗಿದ್ದಾಳೆ.

ವೈಷ್ಣವ್ ಮತ್ತು ಲಕ್ಷ್ಮೀ ಕೂಡ ಅದೇ ಸಾಮೂಹಿಕ ವಿವಾಹ ನಡೆಯುವ ಸ್ಥಳದಲ್ಲಿದ್ದರು, ಅದರೆ ವಿಧಿ ಯಾರ ಮಾತನ್ನೂ ಕೇಳಿಲ್ಲ.

ವಿಧಿ ಯಾರ ಮಾತನ್ನೂ ಕೇಳದೆ ತನಗಿಷ್ಟ ಬಂದ ಹಾಗೆ ಮದುವೆ ಆದ ಕಾರಣ ಕಾವೇರಿ ಕೋಪ ಇನ್ನೂ ಕಡಿಮೆ ಆಗಿಲ್ಲ.

ವಿಧಿ ಎಲ್ಲವನ್ನೂ ಮರೆತು ಮತ್ತೆ ತವರಿಗೆ ಬಂದಿದ್ದಾಳೆ. ಆದರೆ ಕಾವೇರಿ ಅವಳನ್ನು ಮನೆಗೆ ಸೇರಿಸಿಕೊಂಡಿಲ್ಲ. ಆ ಕಾರಣಕ್ಕಾಗಿ ವಿಧಿ ಕೋಪ ಮಾಡಿಕೊಂಡಿದ್ದಾಳೆ.

ತನ್ನ ಗಂಡನನ್ನು ಕರೆದುಕೊಂಡು ವಾಪಸ್ ಹೋಗಿದ್ದಾಳೆ. ಮನೆಗೆ ಹೋಗುತ್ತಿದ್ದ ಹಾಗೆ ಸೀಮೆಎಣ್ಣೆ ಸುರಿದುಕೊಂಡು ತನ್ನ ಗಂಡನಿಗೂ ಸೀಮೆಎಣ್ಣೆ ಎರಚಿದ್ದಾಳೆ.

ವಿಧಿ ತನ್ನ ತಾಯಿ ಮಾಡಿದ ಕೃತ್ಯವನ್ನೇ ನೆನಪಿಸಿಕೊಂಡು ಕೊರಗಿ ಈ ನಿರ್ಧಾರಕ್ಕೆ ಬಂದಿದ್ಧಾಳೆ. ಮಗಳು ಮನೆಗೆ ಹೋದರು ಕತ್ತು ಹಿಡಿದು ಆಚೆ ಹಾಕಿದ್ದಾಳೆ ಕಾವೇರಿ.

ಇನ್ನು ವಿಧಿಯ ಗಂಡ ಯಾವ ತಪ್ಪನ್...