ಭಾರತ, ಮಾರ್ಚ್ 30 -- ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕಾವೇರಿ ತನಗೆ ಬೇಕು ಎಂದು ಚಿಂಗಾರಿಯನ್ನು ಮನೆಗೆ ತಂದಿಟ್ಟುಕೊಂಡಿದ್ದಾಳೆ. ಆದರೆ, ಚಿಂಗಾರಿಗೆ ಪ್ರಾಮಾಣಿಕತೆ ಕಡಿಮೆ. ಅವಳು ಕಾವೇರಿ ವರ್ತನೆಯ ಮೇಲೆ ಅನುಮಾನ ಮಾಡಿಕೊಂಡಿದ್ದಾಳೆ. ಇದಕ್ಕೊಂದು ಮುಖ್ಯ ಕಾರಣವೂ ಇದೆ. ಆ ಕಾರಣವೇನೆಂದರೆ ಸುಪ್ರಿತಾ ಆಡಿರುವ ಮಾತು. ಸುಪ್ರಿತಾ ಕೆಲ ಮಾತುಗಳನ್ನು ಕೇಳಿ ಚಿಂಗಾರಿಗೆ ತುಂಬಾ ಕೋಪ ಬಂದಿದೆ. ಸುಪ್ರಿತಾ ಯಾವತ್ತಿದ್ದರೂ ನೀನು ಕಾವೇರಿನಾ ನಂಬಬೇಡ ಒಂದು ದಿನ ಅವಳು ನಿನಗೇ ಕೇಡು ಮಾಡುತ್ತಾಳೆ ಎಂದು ಹೇಲಿರುತ್ತಾಳೆ. ಆ ಮಾತನ್ನು ಕೇಳಿದ ಚಿಂಗಾರಿಗೆ ಇದ್ದರೂ ಇರಬಹುದು ಎಂದು ಅನಿಸಿದೆ.

ಕಾವೇರಿ ನಿಜಕ್ಕೂ ಏನು ಬೇಕಾದರೂ ಮಾಡಬಲ್ಲಳು ಎಂದು ಅರಿತ ಚಿಂಗಾರಿ ಹೊಸ ಉಪಾಯವೊಂದನ್ನು ಮಾಡಿದ್ದಾಳೆ. ಕಾವೇರಿಗೆ ಹಾಲಿನಲ್ಲಿ ಮತ್ತು ಬರುವ ಪುಡಿಯನ್ನು ಮಿಶ್ರಣ ಮಾಡಿ ಕೊಟ್ಟಿದ್ದಾಳೆ. ಕಾವೇರಿ ಮಿಶ್ರಣ ಮಾಡಿಕೊಟ್ಟ ಹಾಲನ್ನು ಕುಡಿದಿದ್ದಾಳೆ. ಬೇಕು ಎಂದೇ ಲಕ್ಷ್ಮೀಯ ವಿಚಾರವನ್ನು ಕೆದಕಿ ಚಿಂಗಾರಿ ಮಾತಾಡಿಸಿದ್ದಾಳೆ. ಆಗ ಏನೂ ಅರಿಯದೆ ಮತ್ತಿನಲ್...