ಭಾರತ, ಮಾರ್ಚ್ 10 -- ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕಾವೇರಿಗೆ ತನ್ನ ಮಗಳು ವಿಧಿ ಮದುವೆ ಆಗುವುದು ಇಷ್ಟ ಇರುವುದಿಲ್ಲ. ಆದರೆ ವಿಧಿ ಅಮ್ಮನಿಗೂ ಹೇಳದ ಹಾಗೆ ಯಾರ ಸಹಾಯವೂ ಇಲ್ಲದೆ ತಾನೇ ಸಾಮೂಹಿಕ ವಿವಾಹದಲ್ಲಿ ಮದುವೆ ಆಗಬೇಕು ಎಂದು ನಿರ್ಧಾರ ಮಾಡಿರುತ್ತಾಳೆ. ಅಚಾನಕ್ ಆಗಿ ಅಲ್ಲಿನ ಸಾಮೂಹಿಕ ವಿವಾಹಕ್ಕೆ ವೈಷ್ಣವ್ ಹಾಗೂ ಲಕ್ಷ್ಮೀ ಅಥಿತಿಗಳಾಗಿ ಬಂದಿರುತ್ತಾರೆ. ಆ ವಿಚಾರ ತಿಳಿದ ವಿಧಿ ಅಲ್ಲಿಂದ ಹೇಗೆ ತಪ್ಪಿಸಿಕೊಳ್ಳಬೇಕು ಎಂದು ಅಂದುಕೊಳ್ಳುತ್ತಾಳೆ. ಆದರೆ, ಲಕ್ಷ್ಮೀ ಅಲ್ಲಿರುವ ಕಾರಣ ಮಾತಿನ ಬಿಸಿ ಏರುತ್ತದೆ. ವಿಧಿ ಅಲ್ಲಿರುವ ಎಲ್ಲರ ಮುಂದೆ ವೈಷ್ಣವ್ ಹಾಗೂ ಲಕ್ಷ್ಮೀಗೆ ಅವಮಾನ ಮಾಡುತ್ತಾಳೆ.

ವೈಷ್ಣವ್ ತನ್ನ ತಂಗಿಯ ಬದುಕು ಇನ್ನಷ್ಟು ಸುಂದರವಾಗಿರಲಿ ಎಂದು ಬಯಸುತ್ತಿದ್ದರೂ ವಿಧಿ ಅವನನ್ನು ಅಪಾರ್ಥ ಮಾಡಿಕೊಳ್ಳುತ್ತಾಳೆ. ಮಾಧ್ಯಮದವರ ಎದುರು ವಿಧಿ ಬಾಯಿಗೆ ಬಂದಂತೆ ಮಾತಾಡುತ್ತಾಳೆ. ಅದೆಲ್ಲವೂ ಯುಟ್ಯೂಬ್‌ನಲ್ಲಿ ಲೈವ್ ಆಗುತ್ತಾ ಇರುತ್ತದೆ. ಅದನ್ನು ಕಂಡ ವಿಧಿ ಹಾಗೂ ವೈಷ್ಣವ್ ತಾಯಿ ಕಾವೇರಿ ಹಾಗೂ ತಂದೆ ಕೃಷ್ಣ ಕಾರ್‍‌...