ಭಾರತ, ಫೆಬ್ರವರಿ 14 -- Lakshmi Baramma Serial: ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಲಕ್ಷ್ಮೀ ಕಾರುಣ್ಯ ಮನೆಯಲ್ಲಿ ಅಡುಗೆ ಮಾಡಲು ಆರಂಭಿಸಿದ್ದಾಳೆ. ಅದನ್ನು ನೋಡಿ ಕಾರುಣ್ಯ ಅಡುಗೆಯವಳಿಗೆ ಬೈದಿದ್ದಾಳೆ. ಲಕ್ಷ್ಮೀ ಹತ್ತಿರ ಯಾಕೆ ಅಡುಗೆ ಮಾಡಸ್ತಾ ಇದೀಯಾ? ಎಂದು ರೇಗುತ್ತಾಳೆ. ಆಗ ಕೆಲಸದವಳು "ಇಲ್ಲ ಮೇಡಂ, ನಾನೂ ಹೇಳ್ದೆ ಅವರಿಗೆ ಬೇಡ, ಅಡುಗೆ ಮಾಡಬೇಡಿ ಎಂದು ಆದರೂ ಅವರು ಕೇಳ್ಲಿಲ್ಲ" ಎಂದು ಹೇಳುತ್ತಾಳೆ. ಆ ಮಾತನ್ನು ಕೇಳಿ ಕಾರುಣ್ಯ ಲಕ್ಷ್ಮೀ ಹತ್ತಿರ ಮಾತಾಡುತ್ತಾಳೆ. ಅದಾದ ನಂತರದಲ್ಲಿ ಲಕ್ಷ್ಮೀ "ತಾನೇ ಕೆಲಸ ಮಾಡಬೇಕು ಎಂದು ಅಂದುಕೊಂಡೆ ಹಾಗಾಗಿ ನಾನೇ ದೋಸೆ ಮಾಡ್ತಾ ಇದೀನಿ. ಈಗ ಆಲೂಗಡ್ಡೆ ಪಲ್ಯ ಕೂಡ ಆಯ್ತು" ಎಂದು ಹೇಳುತ್ತಾಳೆ.

ಕಾರುಣ್ಯ ನಗುತ್ತಾ "ಹೌದಾ? ಹಾಗಾದ್ರೆ ಓಕೆ..ನಿನಗೇ ಇಷ್ಟ ಇದ್ದು ಮಾಡ್ತಾ ಇದೀಯಾ ಅಂದ್ರೆ ಮಾಡು ಅದರಲ್ಲೇನೂ ಇಲ್ಲ. ಆದ್ರೆ ನೀನು ಈ ಮನೆಯಲ್ಲಿದೀಯಾ ಎನ್ನುವ ಕಾರಣಕ್ಕೆ ಏನನ್ನೂ ಮಾಡೋದ್ ಬೇಡ" ಎಂದು ಹೇಳುತ್ತಾಳೆ. ಆಗ ಲಕ್ಷ್ಮೀ "ಇಲ್ಲ ನಾನು ಮನೆಯಲ್ಲೂ ಇದೇ ರೀತಿ ಅಡುಗೆ ಮಾಡ್ತ ಇದ್ದ...