ಭಾರತ, ಮಾರ್ಚ್ 12 -- ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕಾವೇರಿ ತುಂಬಾ ಖುಷಿಯಾಗಿದ್ದಾಳೆ. ಆದರೆ ಚಿಂಗಾರಿಗೆ ಕಾವೇರಿ ಯಾಕೆ ಇಷ್ಟು ಖುಷಿಯಾಗಿದ್ದಾಳೆ ಎಂದು ಅರ್ಥ ಆಗುತ್ತಿಲ್ಲ. ಕಾವೇರಿ ಏನಾದರೂ ನಾನು ಮಾಡಿದ ತಪ್ಪನ್ನು ಕಂಡುಕೊಂಡಿದ್ದಾಳೋ ಏನೋ? ಎಂದು ಅನುಮಾನವೂ ಆಗುತ್ತದೆ. ಯಾಕೆಂದರೆ ಕಾವೇರಿಗೆ ಕೊಡಬೇಕಿದ್ದ ಡ್ರೈಫ್ರೂಟ್‌ಅನ್ನು ಚಿಂಗಾರಿ ತಿಂದಿರುತ್ತಾಳೆ. ನಾನು ಹೀಗೆಲ್ಲ ಕಳ್ಳತನ ಮಾಡ್ತೀನಿ ಅಂತ ಗೊತ್ತಾದ್ರೆ ಮರ್ಯಾದೆ ಆಗುತ್ತದೆ ಎಂದು ಚಿಂಗಾರಿ ಅಂದುಕೊಳ್ಳುತ್ತಾ ಇರುತ್ತಾಳೆ. ಆದರೆ ಕಾವೆರಿ ಮಾತ್ರ ತುಂಬಾ ಖುಷಿಯಲ್ಲಿರುತ್ತಾಳೆ. ಚಿಂಗಾರಿಯನ್ನು ನಗುತ್ತಲೇ ಬರಮಾಡಿಕೊಳ್ಳುತ್ತಾಳೆ.

"ನಾನು ಯಾಕೆ ಇಷ್ಟೊಂದು ಅರಾಮಾಗಿದಿನಿ ಅಂತ ನಿನಗೆ ಅನುಮಾನ ಆಗ್ತಾ ಇದೆ ಅಲ್ವಾ?" ಎಂದು ಚಿಂಗಾರಿಯನ್ನು ಪ್ರಶ್ನೆ ಮಾಡುತ್ತಾಳೆ. ಆ ಪ್ರಶ್ನೆಗೆ ಏನುತ್ತರ ಕೊಡಬೇಕು ಎಂದು ಅವಳಿಗೆ ಅರ್ಥವೇ ಆಗೋದಿಲ್ಲ. ಕಾವೇರಿಯೇ ಮಾತು ಮುಂದುವರಿಸುತ್ತಾಳೆ. "ಊರಲ್ಲಿರುವ ಎಲ್ಲ ಹಾವಿನ ಮರಿಗಳೂ ನನಗೇ ಬುಸುಗುಡಲು ಆರಂಭಿಸಿದ್ದವು, ಈಗ ನಾನು ಅವುಗಳ ಸ...