ಭಾರತ, ಮಾರ್ಚ್ 13 -- Lakshmi Baramma Serial: ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕಾವೇರಿ ಕುತಂತ್ರದಿಂದ ಲಕ್ಷ್ಮೀಯನ್ನು ಮನೆಯಿಂದ ಆಚೆ ಕಳಿಸಿ ಆಗಿದೆ. ಆದರೆ, ಕಾವೇರಿಗೆ ಅಷ್ಟಕ್ಕೇ ಸಮಾಧಾನ ಆಗಿಲ್ಲ. ಅವಳು ಮತ್ತೆ ಯಾವತ್ತೂ ತನ್ನ ಮನೆಗೆ ಬರದೇ ಇರುವ ರೀತಿ ಮಾಡಬೇಕು ಎಂದು ಆಲೋಚಿಸಿದ್ದಾಳೆ. ಕಾವೇರಿಯ ಮಾತೇ ಈ ಮನೆಯಲ್ಲಿ ನಡೆಯಬೇಕು ಎಂದು ಹೇಳುತ್ತಿದ್ದಾಳೆ. ವೈಷ್ಣವ್‌ಗೆ ಎರಡನೇ ಮದುವೆ ಮಾಡಿಸಲು ಹೊರಟಿದ್ದಾಳೆ. ಇಷ್ಟು ದಿನ ಮದುವೆ ಮಾಡಿಸುತ್ತೇನೆ ಎಂದು ಬಾಯ್ಮಾತಿಗಷ್ಟೇ ಹೇಳುತ್ತಿದ್ದ ಕಾವೇರಿ ಈಗ ಕಾರ್ಯರೂಪಕ್ಕೆ ಇಳಿದಿದ್ದಾಳೆ. ವೈಷ್ಣವ್ ನಿಶ್ಚಿತಾರ್ಥ ಮಾಡಲು ಎಲ್ಲ ಸಿದ್ಧತೆ ಮಾಡಿಕೊಳ್ಳುತ್ತಾ ಇದ್ದಾಳೆ. ಪುರೋಹಿತರನ್ನು ಕರೆದು ದಿನಾಂಕ ನಿಗದಿ ಮಾಡಿಸುತ್ತಿದ್ದಾಳೆ.

ಈ ಎಲ್ಲ ಬೆಳವಣಿಗೆಯನ್ನು ನೋಡಿಕೊಂಡು ಸುಮ್ಮನಿದ್ದರೆ ಆಗದು ಎಂದು ಮೊದಲು ಸುಪ್ರಿತಾ ಮಾತು ಆರಂಭಿಸುತ್ತಾಳೆ. "ಅತ್ಗೆ ನೀವು ಮಾಡ್ತಾ ಇರೋದು ಖಂಡಿತ ಸರಿ ಅಲ್ಲ. ವೈಷ್ಣವ್‌ನ ಚಿನ್ನದಂತ ಹೆಂಡತಿ ಇನ್ನೂ ಬದುಕಿರುವಾಗಲೇ ನೀವು ಹೀಗೆಲ್ಲ ಮಾಡ್ತಾ ಇದೀರ...