ಭಾರತ, ಫೆಬ್ರವರಿ 11 -- Lakshmi Baramma Serial: ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಲಕ್ಷ್ಮೀ ವೈಷ್ಣವ್ ಮನವೊಲಿಸುವ ಪ್ರಯತ್ನ ಮಾಡುತ್ತಿದ್ದಾಳೆ. ಆದರೆ ವೈಷ್ಣವ್ ಮಾತ್ರ ಲಕ್ಷ್ಮೀಯ ಯಾವ ಮಾತಿಗೂ ಬಗ್ಗುತ್ತಿಲ್ಲ. ಅವಳು ಎಷ್ಟೇ ಸಮಾಧಾನದಿಂದ ಮಾತನಾಡಿದರೂ ಸಹ ವೈಷ್ಣವ್ ಮಾತ್ರ ಕೋಪದಲ್ಲೇ ಉತ್ತರಿಸುತ್ತಿದ್ದ. ಅದನ್ನು ಕಂಡು ಲಕ್ಷ್ಮೀಗೆ ತುಂಬಾ ಬೇಸರವಾಗಿ ಅಳು ಬರುತ್ತದೆ. ಯಾಕೆ ವೈಷ್ಣವ್ ಈ ರೀತಿ ಮಾಡ್ತಾ ಇದ್ದಾನೆ ಎನ್ನುವ ಕಾರಣ ಗೊತ್ತಿದ್ದರೂ ಇನ್ನೊಮ್ಮೆ ಅವನನ್ನು ಕೇಳಲು ಮುಂದಾಗಿದ್ದಾಳೆ. "ನಾನು ಏನು ಮಾಡಿದ್ರೆ ನಿಮಗೆ ಕೋಪ ಕಡಿಮೆ ಆಗುತ್ತದೆ?" ಎಂದು ಪ್ರಶ್ನೆ ಮಾಡಿದ್ದಾಳೆ.

ಆಗ ವೈಷ್ಣವ್ ಅವಳಿಗೆ ಉತ್ತರಿಸುತ್ತಾ.. "ನಿಮಗೆ ನನ್ನ ಮೇಲೆ ನಂಬಿಕೆಯೇ ಇಲ್ಲ. ನಂಬಿಕೆ ಇದ್ರೆ ನೀವು ಅವತ್ತೇ ನನಗೆ ಎಲ್ಲ ಸತ್ಯ ಹೇಳ್ತಾ ಇದ್ರಿ, ಈಗ ಏನೂ ಹೇಳೋದು ಬೇಡ" ಎನ್ನುತ್ತಾ ಅವನು ಲಕ್ಷ್ಮೀಯನ್ನು ತಿರಸ್ಕರಿಸಿ ಮತ್ತೆ ಮುಂದೆ ಹೋಗುತ್ತಾನೆ. ಆದರೆ ವೈಷ್ಣವ್ ಹೋಗದಂತೆ ತಡೆಯುತ್ತಾಳೆ. ವೈಷ್ಣವ್‌ನನ್ನು ತಬ್ಬಿಕೊಳ್ಳುತ್ತಾಳೆ. ಹೇಗಾದರ...