ಭಾರತ, ಮಾರ್ಚ್ 19 -- ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ವೈಷ್ಣವ್ ಮತ್ತು ಲಕ್ಷ್ಮೀ ಇಬ್ಬರೂ ಮತ್ತೆ ಒಂದಾಗುವ ಸೂಚನೆ ಸಿಕ್ಕಿದೆ.

ವೈಷ್ಣವ್ ಇಷ್ಟು ದಿನ ಕಾವೇರಿ ಹೇಳಿದ ಎಲ್ಲಾ ಮಾತುಗಳನ್ನು ಕೇಳುತ್ತಿಲ್ಲ. ಅವಳು ಏನೇ ಅಂದರೂ ಅದೇ ಸರಿ ಎನ್ನುತ್ತಿದ್ದ. ಆದರೆ, ಈಗ ಬದಲಾಗಿದ್ದಾನೆ.

ಲಕ್ಷ್ಮೀಯನ್ನು ಮಿಥುನ್‌ನಿಂದ ಪಾರು ಮಾಡಿಕೊಂಡು ಬಂದಿದ್ದಾನೆ. ಲಕ್ಷ್ಮೀ ಈಗಲೂ ನನ್ನ ಹೆಂಡತಿ ಎಂದು ಎಲ್ಲರ ಎದುರು ಹೇಳಿದ್ದಾನೆ.

ವೈಷ್ಣವ್ ಆಡಿದ ಮಾತುಗಳನ್ನು ಕೇಳಿ ಲಕ್ಷ್ಮೀಗೆ ಎಲ್ಲಿಲ್ಲದ ಆನಂದವಾಗಿದೆ. ಆನಂದಭಾಷ್ಪ ಸುರಿಸಿದ್ದಾಳೆ.

ಕಾವೇರಿ ತನ್ನ ಮಗ ವೈಷ್ಣವ್ ಮಾಡಿದ ಕೆಲಸವನ್ನು ಪ್ರಶ್ನೆ ಮಾಡುತ್ತಿದ್ದಾಳೆ. ನಿನಗ್ಯಾಕೆ ಬೇಕಿತ್ತು? ಅವಳ ವಿಚಾರ ಎಂದು ಕೆಣಕಿದ್ದಾಳೆ.

ಕಾವೇರಿ ಆಡಿದ ಆ ಮಾತನ್ನು ಕೇಳಿ ವೈಷ್ಣವ್‌ಗೆ ಕೋಪ ಬಂದಿದೆ. "ಅಮ್ಮ ನೀನು ಈ ರೀತಿ ಮಾತಾಡ್ತೀಯ ಎಂದು ನಾನು ಅಂದುಕೊಂಡಿರಲಿಲ್ಲ" ಎಂದು ವೈಷ್ಣವ್ ಹೇಳಿದ್ದಾನೆ.

ಕಾವೇರಿಗೆ ಸರಿಯಾದ ಉತ್ತರ ಕೊಟ್ಟ ವೈಷ್ಣವ್ ನಡೆಗೆ ವೀಕ್ಷಕರು ಖುಷಿಯಾಗಿದ್ದಾರೆ. ಮತ್ತೆ ಲಕ್ಷ್ಮೀ, ...