ಭಾರತ, ಫೆಬ್ರವರಿ 13 -- ಲಕ್ಷ್ಮೀ ಬಾರಮ್ಮ ಧಾರಾವಾಹಿ ಕಾವೇರಿ ತನ್ನ ತಲೆಗೆ ಆದ ಗಾಯಕ್ಕೆ ಔ‍‍ಷಧಿ ಹಚ್ಚಿಕೊಳ್ಳುತ್ತಾ ಕುಳಿತಿದ್ದಳು. ಆಗ ಅವಳಿಗೆ ಹಳೆಯ ಘಟನೆಗಳೆಲ್ಲ ನೆನಪಿಗೆ ಬಂದವು. ಲಕ್ಷ್ಮೀ ಏನೇ ಆದ್ರೂ ನಾನು ಮಾತ್ರ ನಿಮ್ಮ ಕಾಲಿಗೆ ಬೀಳೋದಿಲ್ಲ ಎಂದು ಹೇಳಿದ ಮಾತೇ ಅವಳಿಗೆ ಮತ್ತೆ ಮತ್ತೆ ನೆನಪಾಗುತ್ತಾ ಇತ್ತು. ಇನ್ನು ಕೀರ್ತಿ ಕೂಡ ನೆನಪಾಗುತ್ತಿದ್ದಳು. ಲಕ್ಷ್ಮೀ ಹೇಳಿದ ಮಾತು ಅವಳ ಕಿವಿಯಲ್ಲಿ ಗುನುಗುತ್ತಿತ್ತು "ವೈಷ್ಣವ್ ಅವರಿಗೆ ನನ್ನ ಪ್ರೀತಿಯ ಅರಿವಾದರೆ ಅವರು ಖಂಡಿತ ನನ್ನ ಬಳಿ ಬಂದೇ ಬರ್ತಾರೆ" ಎಂಬ ಮಾತನ್ನು ಲಕ್ಷ್ಮೀ ಆಡಿದ್ದಳು. ಆ ಮಾತನನ್ನು ನೆನೆಸಿಕೊಳ್ಳುತ್ತಾ. "ಪಾಪ ಲಕ್ಷ್ಮೀ ತನ್ನ ಕನಸು ನನಸಾಗೋದಿಲ್ಲ ಎಂದು ಗೊತ್ತಿಲ್ಲದೇ ಇನ್ನಷ್ಟು ಕನಸು ಕಾಣುತ್ತಾ ಇದ್ದಾಳೆ. ವೈಷ್ಣವ್ ಯಾವತ್ತಿದ್ರೂ ನನ್ನ ಮಾತನ್ನೇ ಕೇಳೋದು" ಎಂದು ಅಂದುಕೊಳ್ಳುತ್ತಾ ಇರುತ್ತಾಳೆ.

ಅಷ್ಟರಲ್ಲಿ ಅಲ್ಲಿಗೆ ಸುಪ್ರಿತಾ ಬರುತ್ತಾಳೆ. ಬಂದು 'ಅತ್ಗೆ' ಎಂದು ಕೂಗುತ್ತಾಳೆ. ಆ ಧ್ವನಿ ಕೇಳುತ್ತಿದ್ದಂತೆಯೇ ಕಾವೇರಿ ಬೆಚ್ಚಿ ಬೀಳುತ್ತಾಳೆ. ಆ...