ಭಾರತ, ಮಾರ್ಚ್ 7 -- ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ವಿಧಿ ತಾನು ಮದುವೆ ಆಗುತ್ತೇನೆ ಎಂದು ಸಾಮೂಹಿಕ ವಿವಾಹಕ್ಕೆ ಬಂದಿದ್ದಾಳೆ. ಆದರೆ ಅಲ್ಲಿಗೆ ವೈಷ್ಣವ್ ಮತ್ತು ಲಕ್ಷ್ಮೀ ಬರ್ತಾರೆ ಎಂದು ಅವಳು ಅಂದುಕೊಂಡಿರಲಿಲ್ಲ. ಅವರು ಅಲ್ಲಿಗೆ ಬಂದ ಕಾರಣ ವಿಧಿಗೆ ತೊಂದರೆ ಆಗಿದೆ. ಇಲ್ಲ ಎಂದರೆ ಅವಳು ಯಾರನ್ನೂ ಕೇಳದೆ ವಿಕ್ಕಿಯನ್ನು ಮದುವೆ ಆಗುತ್ತಿದ್ದಳು. ವೈಷ್ಣವ್ ವಿಧಿ ಹತ್ತಿರ ಮಾತಿಗಳಿಯುತ್ತಾನೆ. "ನೀನು ಯಾಕೆ ಇಲ್ಲಿಗೆ ಬಂದು ಮದುವೆ ಆಗಬೇಕು? ಮನೆಯಲ್ಲೇ ಎಲ್ಲ ವಿಷಯ ಹೇಳಿದ್ರೆ ಆಗ್ತಿತ್ತಲ್ವಾ?" ಎಂದು ಪ್ರಶ್ನೆ ಮಾಡುತ್ತಾನೆ. ಆದರೆ ಆ ಸಂದರ್ಭಕ್ಕೆ ಅವನಾಡಿದ ಮಾತು ಅಲ್ಲಿದ್ದ ಎಲ್ಲರನ್ನೂ ಕೆಣಕುತ್ತದೆ. "ಇಲ್ಲಿ ಬಂದು ಮದುವೆ ಆಗುವುದು ಅಂದ್ರೆ ಏನು ಸರ್? ಇಲ್ಲಿ ಬಂದವರಿಗೆ ಫ್ಯಾಮಿಲಿ ಇಲ್ಲ. ಮದುವೆ ಆಗೋಕೆ ಹಣ ಇಲ್ಲ? ಎಂದಾ" ಎಂದು ಪ್ರಶ್ನಿಸುತ್ತಾರೆ. ಅಲ್ಲೇ ಇದ್ದ ಮೀಡಿಯಾದವರೂ ಸಹ ಪ್ರಶ್ನೆ ಮಾಡುತ್ತಾರೆ.

ಆ ಸಂದರ್ಭವನ್ನು ನಿಭಾಯಿಸಲು ವೈಷ್ಣವ್ ಪ್ರಯತ್ನಿಸುತ್ತಾನೆ. ಆದರೆ ಲಕ್ಷ್ಮೀ ಮಾತಾಡುವವರೆಗೂ ಅವರು ಸುಮ್ಮನಾಗುವುದ...