ಭಾರತ, ಫೆಬ್ರವರಿ 17 -- ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ವೈಷ್ಣವ್ ಹಾಗೂ ಅವನ ಮನೆಯವರೆಲ್ಲರೂ ಒಂದು ನಿರ್ಧಾರಕ್ಕೆ ಬಂದಂತಿದೆ. ಇದು ಕಾವೇರಿಯ ನಿರ್ಣಯ ಎಂಬ ಸತ್ಯ ಗೊತ್ತಾದರೂ ಯಾರೂ ಏನೂ ಮಾತಾಡುತ್ತಿಲ್ಲ. ಲಕ್ಷ್ಮೀ ಬದುಕಿನಲ್ಲಿ ಕಾವೇರಿ ಬಿರುಗಾಳಿಯಂತೆ ಬಂದಿದ್ದಾಳೆ. ವೈಷ್ಣವ್ ಹಾಗೂ ಕಾವೇರಿ ಇಬ್ಬರೂ ಈ ಮೊದಲೇ ಮಾತಾಡಿಕೊಂಡಿದ್ದಾರೆ. ಆದರೆ, ಈಗ ಲಕ್ಷ್ಮೀ ಎದುರು ಆ ಸತ್ಯ ಬಯಲಾಗುತ್ತಿದೆ. ಕಾವೇರಿ ತುಂಬಾ ಖುಷಿಯಿಂದ ಮಾತಾಡುತ್ತಾ ಇದ್ದಾಳೆ. ಲಕ್ಷ್ಮೀ ಭಯ ಹಾಗೂ ದುಃಖದಿಂದ ಕೂಡಿದ್ದಾಳೆ. ಹೀಗಿರುವಾಗ.. ಲಕ್ಷ್ಮೀಯ ಮಾವ ಕೃಷ್ಣ ಹಾಗೂ ಸುಪ್ರಿತಾ ಎಲ್ಲರೂ ತುಂಬಾ ಬೇಸರದಲ್ಲಿದ್ದಾರೆ.

ಗಂಗಕ್ಕನಿಗೂ ಈ ವಿಚಾರ ಬೇಸರ ತಂದಿದೆ. ಲಕ್ಷ್ಮೀ ಕೆಲ ದಿನಗಳಿಂದ ಕೀರ್ತಿ ಮನೆಯಲ್ಲಿ ಉಳಿದುಕೊಳ್ಳುತ್ತಾ ಇದ್ದಾಳೆ. ಇದೇ ಸಂದರ್ಭದಲ್ಲಿ ವೈಷ್ಣವ್ ಈಗ ತಾನು ಎರಡನೇ ಮದುವೆ ಮಾಡಿಕೊಳ್ಳಲು ಒಪ್ಪಿಕೊಂಡಿದ್ದಾನೆ. ಈ ವಿಚಾರ ತಿಳಿದ ನಂತರ ಲಕ್ಷ್ಮೀ ತುಂಬಾ ಕೋಪದಿಂದ ಕಾವೇರಿಯನ್ನು ಪ್ರಶ್ನೆ ಮಾಡುತ್ತಾಳೆ. "ಯಾಕೆ ನೀವು ನನ್ನ ಗಂಡನಿಗೆ ಮತ್ತೊಂದು ಮ...