ಭಾರತ, ಮಾರ್ಚ್ 5 -- ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ವಿಧಿ ಯಾರಿಗೂ ತಿಳಿಯದ ಹಾಗೆ ಸಾಮೂಹಿಕ ವಿವಾಹದಲ್ಲಿ ಮದುವೆಯಾಗಬೇಕು ಎಂದು ಅಂದುಕೊಂಡಿರುತ್ತಾಳೆ. ಆದರೆ ಅಲ್ಲಿಗೆ ತನ್ನ ಅಣ್ಣ, ಅತ್ತಿಗೆನೇ ಬಂದಿರ್ತಾರೆ ಎಂಬುದರ ಸಣ್ಣ ಸುಳಿವು ಅವಳಿಗಿರುವುದಿಲ್ಲ. ತಕ್ಷಣಕ್ಕೆ ವಿಧಿಯನ್ನು ಅಲ್ಲಿ ನೋಡಿದ ವೈಷ್ಣವ್‌ಗೆ ತುಂಬಾ ಶಾಕ್ ಆಗುತ್ತದೆ. ನನ್ನ ತಂಗಿ ಇಲ್ಲೇನು ಮಾಡುತ್ತಿದ್ದಾಳೆ ಎಂಬ ಪ್ರಶ್ನೆ ಅವನಲ್ಲಿ ಮೂಡುತ್ತದೆ. ಲಕ್ಷ್ಮೀಗೆ ಎಲ್ಲ ಅರ್ಥ ಆದ್ರೂ ಏನೂ ಮಾಡುವ ಪರಿಸ್ಥಿತಿಯಲ್ಲಿ ಅವಳಿರೋದಿಲ್ಲ. ಸಾಮೂಹಿಕವಾಗಿ ಎಲ್ಲರ ಮುಂದೆ ವಿಧಿ ಜಗಳ ಮಾಡಿದ್ದಾಳೆ. ವೈಷ್ಣವ್ ಸೆಲೆಬ್ರೆಟಿ ಅವನ ಮರ್ಯಾದೆ ಏನಾಗಬಹುದು ಎಂದು ಒಂದು ಕ್ಷಣವೂ ಅವಳು ಯೋಚಿಸಿಲ್ಲ.

ವಿಧಿ ತಾನು ಮದುವೆ ಆಗುವ ಬಗ್ಗೆ ಮನೆಯಲ್ಲಿ ಹೇಳಿಕೊಂಡರೂ ಯಾರೂ ಅವಳನ್ನು ಲೆಕ್ಕಿಸಿರಲಿಲ್ಲ. ಇದೇ ವಿಚಾರಕ್ಕೆ ಅವಳು ಕೋಪ ಮಾಡಿಕೊಂಡಿದ್ದಳು. ಯಾವಾಗಲೂ ಮನೆಯಲ್ಲಿ ಪುಟ್ಟ, ಪುಟ್ಟ ಎಂದು ಅವಳ ಅಮ್ಮ ಕಾವೇರಿ ತನ್ನ ಮಗನನ್ನು ಮಾತ್ರ ಮುದ್ದು ಮಾಡುತ್ತಾಳೆ. ನನ್ನ ಬಗ್ಗೆ ಕಾಳಜಿ ಇಲ್ಲ ಎಂ...