ಭಾರತ, ಏಪ್ರಿಲ್ 15 -- ಸುಮಾರು 2 ವರ್ಷಗಳ ಕಾಲ ಪ್ರಸಾರವಾಗಿ ಪ್ರೇಕ್ಷಕರನ್ನು ರಂಜಿಸಿದ್ದ ಲಕ್ಷ್ಮೀ ಬಾರಮ್ಮ ಧಾರಾವಾಹಿ ಏಪ್ರಿಲ್ 11ಕ್ಕೆ ಮುಕ್ತಾಯಗೊಂಡಿದೆ. ಕಾವೇರಿಯ ಅಂತ್ಯದ ಜೊತೆಗೆ ಲಕ್ಷ್ಮೀ ಸೀಮಂತ ಕೂಡ ನೆರವೇರುವ ಮೂಲಕ ಧಾರಾವಾಹಿಗೆ ಅಂತ್ಯ ಹಾಡಲಾಗಿತ್ತು.

ಕಲರ್ಸ್ ಕನ್ನಡದ ಟಾಪ್ ಧಾರಾವಾಹಿಗಳಲ್ಲಿ ಒಂದಾಗಿದ್ದ ಲಕ್ಷ್ಮೀ ಬಾರಮ್ಮ ಟಿಆರ್‌ಪಿಯಲ್ಲಿ ಸದಾ ಟಾಪ್‌ನಲ್ಲಿ ಇರುತ್ತಿತ್ತು. ಲಕ್ಷ್ಮೀ-ವೈಷ್ಣವ್ ಜೋಡಿಯ ಜೊತೆಗೆ ಕೀರ್ತಿಯ ಅಭಿನಯವು ಕಿರುತೆರೆ ಪ್ರೇಕ್ಷಕರ ಮೇಲೆ ಮೋಡಿ ಮಾಡಿತ್ತು.

ಟಿಆರ್‌ಪಿ ಚೆನ್ನಾಗಿ ಇದ್ದರೂ ಕೂಡ ಇದ್ದಕ್ಕಿದ್ದ ಹಾಗೆ ಧಾರಾವಾಹಿ ಮುಗಿಸುವ ನಿರ್ಧಾರ ಮಾಡಿತ್ತು ವಾಹಿನಿ. ಕಾವೇರಿ ಅಟ್ಟಹಾಸ ನೋಡಲಾಗದ ವೀಕ್ಷಕರಿಗೆ ಅವಳ ಅಂತ್ಯವನ್ನು ತೋರಿಸಲಾಗಿತ್ತು. ಇದರೊಂದಿಗೆ ಟ್ವಿಸ್ಟ್ ಎಂಬಂತೆ ಲಕ್ಷ್ಮೀ ಗರ್ಭಿಣಿಯಾಗಿದ್ದು ಸೀಮಂತ ಕಾರ್ಯಕ್ರಮ ಕೂಡ ನೆರವೇರಿತ್ತು.

ಲಕ್ಷ್ಮೀ ಬಾರಮ್ಮ ಮುಗಿದು, ಆ ಹೊತ್ತಿಗೆ ಮುದ್ದು ಸೊಸೆ ಧಾರಾವಾಹಿ ಪ್ರಸಾರವಾಗಲು ಆರಂಭವಾದರೂ ಕೂಡ ಕಿರುತೆರೆ ವೀಕ್ಷಕರಿಗೆ ಆ ಒಂದು ಅನು...