ಭಾರತ, ಮಾರ್ಚ್ 28 -- ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಲಕ್ಷ್ಮೀ ಮಲಗಿರುವ ಸಂದರ್ಭವನ್ನೇ ನೋಡಿ ಕೀರ್ತಿ ಅವಳ ಮೊಬೈಲ್ ಎತ್ತಿಕೊಳ್ಳುತ್ತಾಳೆ. ಅವಳ ಮೊಬೈಲ್ ಎತ್ತಿಕೊಂಡು ಹೋಗಿ ತಾನೇ ವೈಷ್ಣವ್ ಹತ್ತಿರ ಮಾತಾಡಬೇಕು ಎಂದು ಸಹ ಅಂದುಕೊಳ್ಳುತ್ತಾಳೆ. ಕಳ್ಳನ ಹಾಗೆ ಲಕ್ಷ್ಮೀ ಮಲಗಿರುವ ಕೋಣೆಗೆ ನುಗ್ಗಿ ಅವಳಿಗೆ ಗೊತ್ತಾಗದ ರೀತಿಯಲ್ಲಿ ಮೊಬೈಲ್ ತೆಗೆದುಕೊಳ್ಳಲು ನೋಡುತ್ತಾಳೆ. ಆದರೆ ಅಷ್ಟರಲ್ಲಿ ಲಕ್ಷ್ಮೀಗೆ ಎಚ್ಚರ ಆಗುತ್ತದೆ. ಅವಳು ಕೀರ್ತಿಯನ್ನು ನೋಡಿ ಕಂಗಾಲಾಗುತ್ತಾಳೆ. ಯಾಕೆಂದರೆ ನಿದ್ದೆಗಣ್ಣಿನಲ್ಲಿ ತಕ್ಷಣ ಮುಖದ ಎದುರೇ ಯಾರಾದರೂ ಬಂದರೆ ಎಲ್ಲರಿಗೂ ಒಮ್ಮೆ ಹೆದರಿಕೆ ಆಗುತ್ತದೆ. ಈಗ ಲಕ್ಷ್ಮೀಗೂ ಅದೇ ರೀತಿ ಆಗಿದೆ.

ಆ ನಂತರದಲ್ಲಿ ಲಕ್ಷ್ಮೀ, ಕೀರ್ತಿ ಬಳಿ ಮಾತಾಡುತ್ತಾಳೆ. "ಯಾಕೆ ನೀನು ಇಲ್ಲಿ ಬಂದಿದ್ದೀಯಾ? ನಿನ್ನ ಕೈಯ್ಯಲ್ಲಿ ಯಾಕೆ ನನ್ನ ಮೊಬೈಲ್ ಇದೆ?" ನೀನು ಏನು ಮಾಡಬೇಕು ಅಂದುಕೊಂಡಿರುವೆ? ಎಂದು ಪ್ರಶ್ನೆ ಮಾಡುತ್ತಾಳೆ. ಆಗ ಕೀರ್ತಿಗೆ ತಾನು ಸುಳ್ಳು ಹೇಳಬೇಕು ಎಂದು ಅನಿಸೋದಿಲ್ಲ. ಅವಳು ಸತ್ಯವನ್ನೇ ಹೇಳುತ್ತಾಳೆ. "...