ಭಾರತ, ಜನವರಿ 31 -- ಕೀರ್ತಿ ಮತ್ತು ಲಕ್ಷ್ಮೀ ಒಂದು ಕಾಲದಲ್ಲಿ ಪರಮ ವೈರಿಗಳಾಗಿದ್ದವರು, ಆದರೆ ಈಗ ಒಬ್ಬರಿಗೆ ಇನ್ನೊಬ್ಬರ ಆಸರೆಯೇಬೇಕು. ಬದುಕು ಹೇಗೆಲ್ಲ ಬದಲಾಗುತ್ತದೆ ಎಂದು ಲಕ್ಷ್ಮೀ ಯೋಚಿಸುತ್ತಿದ್ದಾಳೆ. ಸಾಕಷ್ಟು ಏರುಪೇರುಗಳನ್ನು ಕಂಡು ಈಗ ಲಕ್ಷ್ಮೀ ತನ್ನ ಮನೆಯನ್ನು ಬಿಟ್ಟು ಕೀರ್ತಿ ಇದ್ದಲ್ಲಿಗೆ ಬಂದಿದ್ದಾಳೆ. ವೈಷ್ಣವ್ ಕೂಡ ಲಕ್ಷ್ಮೀ ಪರ ನಿಲ್ಲಲಿಲ್ಲ. ಇಂತಹ ಸಂದರ್ಭದಲ್ಲಿ ಜತೆಯಾಗಿದ್ದು ಕೀರ್ತಿ ಮಾತ್ರ. ಲಕ್ಷ್ಮೀ ನೋವಿನಿಂದ ತಾನು ಊಟ ಮಾಡುವುದಿಲ್ಲ ಎಂದು ಹಟ ಮಾಡುತ್ತಾ ಇರುತ್ತಾಳೆ. ಆಗ ಕೀರ್ತಿ ತಾನೇ ಹೇಗಾದರೂ ಮಾಡಿ ಇವಳಿಗೆ ಊಟ ಮಾಡಿಸಬೇಕು ಎಂದು ಅಂದುಕೊಳ್ಳುತ್ತಾಳೆ. ತನಗೆ ತಿಳಿದ ಮಟ್ಟಿಗೆ ಸಮಾಧಾನ ಮಾಡುತ್ತಾಳೆ.

ಆದರೆ ಲಕ್ಷ್ಮೀ ಮಾತ್ರ ಕೀರ್ತಿಯ ಯಾವ ಮಾತಿಗೂ ಸಮಾಧಾನ ಆದ ರೀತಿ ಕಾಣುವುದಿಲ್ಲ. ನಂತರ ಕೀರ್ತಿಗೂ ಲಕ್ಷ್ಮೀ ಪರಿಸ್ಥಿತಿ ನೋಡಿ ಬೇಜಾರಾಗುತ್ತದೆ. ಕೀರ್ತಿಯನ್ನು ನೋಡಿ ಲಕ್ಷ್ಮೀ ಇನ್ನಷ್ಟು ಸಂಕಟಪಟ್ಟುಕೊಳ್ಳುತ್ತಾಳೆ. "ಒಂದು ದಿನ ನಾನು ನೀನು ಈ ರೀತಿ ಆಗ್ತೀವಿ, ಕೊನೆಗೆ ನನಗೆ ನಿನ್ನ ಅವಶ್ಯಕತ...