ಭಾರತ, ಏಪ್ರಿಲ್ 12 -- ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಲಕ್ಷ್ಮೀ ಬಾರಮ್ಮ ಧಾರಾವಾಹಿ ಮುಕ್ತಾಯಗೊಂಡಿದೆ. ಶುಕ್ರವಾರ ಪ್ರಸಾರವಾದ 605 ಕೊನೆಯ ಸಂಚಿಕೆಯ ಕಥೆ ಇಲ್ಲಿದೆ. ಮನೆಯವರೆಲ್ಲಾ ತಪ್ಪು ಎತ್ತಿ ತೋರಿಸಿದರೂ, ಮಗ ವೈಷ್ಣವ್‌ ಕೂಡಾ ನೀನು ತಪ್ಪು ಮಾಡಿದೆ ಎಂದು ಹೇಳಿದರೂ ಕಾವೇರಿ ಮಾತ್ರ ದುರಹಂಕಾರದಿಂದಲೇ ವರ್ತಿಸುತ್ತಾಳೆ. ನಾನು ತಪ್ಪೇ ಮಾಡಿಲ್ಲ ಎಂದು ವಾದಿಸುತ್ತಾಳೆ. ಕೊನೆ ಕ್ಷಣದಲ್ಲೂ ಲಕ್ಷ್ಮೀಯನ್ನು ಹಂಗಿಸುತ್ತಾಳೆ. ಕಾವೇರಿ ಕಾಲು ಜಾರಿ ಬೆಟ್ಟದ ಮೇಲಿಂದ ಬಿದ್ದು ಪ್ರಾಣ ಕಳೆದುಕೊಳ್ಳುತ್ತಾಳೆ.

ವೈಷ್ಣವ್‌ ಹಾಗೂ ಮನೆಯವರು ಕಾವೇರಿ 13ನೇ ದಿನದ ಕಾರ್ಯವನ್ನು ಶಾಸ್ತ್ರೋಕ್ತವಾಗಿ ನೆರವೇರಿಸುತ್ತಾರೆ. ಎಲ್ಲರೂ ಕಾವೇರಿಯನ್ನು ನೆನೆದು ಕಣ್ಣೀರಿಡುತ್ತಾರೆ. ಅವಳು ಎಷ್ಟು ಚೆನ್ನಾಗಿ ಬದುಕಬಹುದಿತ್ತು, ಆದರೆ ತನ್ನ ದುರ್ಬುದ್ಧಿಯಿಂದಲೇ ಪ್ರಾಣ ಕಳೆದುಕೊಂಡಳು ಎಂದು ಕಾವೇರಿ ತಾಯಿ ದುಃಖ ವ್ಯಕ್ತಪಡಿಸುತ್ತಾಳೆ. ಶಾಸ್ತ್ರಗಳು ಮುಗಿದ ನಂತರ, ಕಾಗೆಗೆ ಪಿಂಡ ಇಡುವಂತೆ ಪುರೋಹಿತರು ವೈಷ್ಣವ್‌ಗೆ ಸೂಚಿಸುತ್ತಾರೆ. ವೈಷ್ಣವ...