ಭಾರತ, ಏಪ್ರಿಲ್ 2 -- Laapataa Ladies: ಕಿರಣ್‌ ರಾವ್‌ ನಿರ್ದೇಶನದ ಕಾಮಿಡಿ ಡ್ರಾಮಾ ಲಾಪತಾ ಲೇಡಿಸ್‌ ಬಿಡುಗಡೆಯಾಗಿ ಒಂದು ವರ್ಷ ಕಳೆದರೂ ಅದರ ಬಗೆಗಿನ ಸುದ್ದಿಗಳು ಕೊನೆಯಾಗಿಲ್ಲ. ಈ ಸಿನಿಮಾವನ್ನು 2025ರ ಆಸ್ಕರ್‌ ಪ್ರಶಸ್ತಿಗೆ ಭಾರತವು ಅಧಿಕೃತವಾಗಿ ಕಳುಹಿಸಿತ್ತು. ಆದರೆ, ಈ ಸಿನಿಮಾದ ಕುರಿತು ಇತ್ತೀಚೆಗೆ ಹೊಸ ದೂರೊಂದು ಕೇಳಿಬಂದಿದೆ. ಇದು 2019ರ ಅರೆಬಿಕ್‌ ಸಿನಿಮಾ ಬುರ್ಕಾ ಸಿಟಿಯನ್ನು ನಕಲು ಮಾಡಿರುವ ಸಿನಿಮಾ ಎಂದು ದೂರಲಾಗುತ್ತಿದೆ. ಬುರ್ಕಾ ಸಿಟಿಯ ವಿಡಿಯೋವೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಕಿರಣ್‌ ರಾವ್‌ ಅವರ ಬಾಲಿವುಡ್‌ ಸಿನಿಮಾ ಮೂಲ ಕಥೆಯಲ್ಲ, ಅದು ನಕಲು ಎಂದು ಜನರು ಸೋಷಿಯಲ್‌ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದೇ ಸಮಯದಲ್ಲಿ ಭಾರತದಲ್ಲಿನ ಕೃತಿ ಚೌರ್ಯಗಳ ಕುರಿತೂ ಚರ್ಚೆಯಾಗುತ್ತಿದೆ.

ಅರೇಬಿಕ್ ಕಿರುಚಿತ್ರ 'ಬುರ್ಕಾ ಸಿಟಿ'ಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗುತ್ತಿದೆ. ಕಿರಣ್‌ ರಾವ್‌ ಅವರ ಲಾಪತಾ ಲೇಡಿಸ್‌ ಸಿನಿಮಾವು ಬುರ್ಕಾ ಸಿಟಿಯ ನಕಲು ಹೌದೋ ಅಲ್ವ...