Bengaluru, ಮಾರ್ಚ್ 27 -- Empuraan Twitter Review: ಮಲಯಾಳಂ ಸೂಪರ್‌ಸ್ಟಾರ್ ಮೋಹನ್ ಲಾಲ್ ಮತ್ತು ಸ್ಟಾರ್ ಹೀರೋ ಮತ್ತು ನಿರ್ದೇಶಕ ಪೃಥ್ವಿರಾಜ್ ಸುಕುಮಾರನ್ ಕಾಂಬಿನೇಷನ್‌ L2: ಎಂಪುರಾನ್‌ ಸಿನಿಮಾ ಇಂದು (ಮಾ. 27) ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗಿದೆ. ಲೂಸಿಫರ್ ಚಿತ್ರದ ಮುಂದುವರಿದ ಭಾಗವಾದ ಎಂಪುರಾನ್ ಸಿನಿಮಾದಲ್ಲಿ ಮೋಹನ್ ಲಾಲ್, ಪೃಥ್ವಿರಾಜ್ ಸುಕುಮಾರನ್, ಮಂಜು ವಾರಿಯರ್, ಟೋವಿನೋ ಥಾಮಸ್, ಅಭಿಮನ್ಯು ಸಿಂಗ್, ಸಾಯಿಕುಮಾರ್, ಸೂರಜ್ ವೆಂಜರಾಮಡು, ಫಾಜಿಲ್, ಸಚಿನ್ ಖೇಡ್ಕರ್, ಸಾನಿಯಾ ಅಯ್ಯಪ್ಪನ್ ಮತ್ತು ಗೇಮ್ ಆಫ್ ಥ್ರೋನ್ಸ್ ಖ್ಯಾತಿಯ ಜೆರೋಮ್ ಫ್ಲಿನ್ ಮುಂತಾದವರು ನಟಿಸಿದ್ದಾರೆ. ಸುಜಿತ್ ವಾಸುದೇವ್ ಛಾಯಾಗ್ರಹಣ ಮತ್ತು ದೀಪಕ್ ದೇವ್ ಸಂಗೀತ ಚಿತ್ರಕ್ಕಿದೆ.

ಶ್ರೀ ಗೋಕುಲಂ ಮೂವೀಸ್, ಆಶೀರ್ವಾದ್ ಸಿನಿಮಾಸ್ ಪ್ರೈವೇಟ್ ಲಿಮಿಟೆಡ್ ಮತ್ತು ಲೈಕಾ ಪ್ರೊಡಕ್ಷನ್ಸ್ ಬ್ಯಾನರ್‌ಗಳ ಅಡಿಯಲ್ಲಿ ಆಂಟೋನಿ ಪೆರುಂಬವೂರ್ ಮತ್ತು ಗೋಕುಲಂ ಗೋಪಾಲನ್ ಜಂಟಿಯಾಗಿ ಎಂಪುರಾನ್‌ ಚಿತ್ರವನ್ನು ನಿರ್ಮಿಸಿದ್ದಾರೆ. ಇಂದು (ಮಾರ...