ಭಾರತ, ಮಾರ್ಚ್ 6 -- KVS Admissions 2025-26 : ಕೇಂದ್ರೀಯ ವಿದ್ಯಾಲಯದ 2025-26ನೇ ಸಾಲಿನ1 ನೇ ತರಗತಿ ಮತ್ತು ಬಾಲವಟಿಕಾ ಪ್ರವೇಶಕ್ಕಾಗಿ ಮಾರ್ಚ್ 7 ರಿಂದ ನೋಂದಣಿ ಪ್ರಾರಂಭವಾಗಲಿದೆ. ಕೇಂದ್ರೀಯ ವಿದ್ಯಾಲಯ ಸಂಘಟನೆಯ ಅಧಿಸೂಚನೆಯ ಪ್ರಕಾರ, 1 ನೇ ತರಗತಿ ಪ್ರವೇಶಕ್ಕಾಗಿ ಆನ್‌ಲೈನ್‌ ನೋಂದಣಿ ಮಾರ್ಚ್ 7 ರಂದು ಬೆಳಿಗ್ಗೆ 10 ರಿಂದ ಮಾರ್ಚ್ 21 ರಂದು ರಾತ್ರಿ 10 ಗಂಟೆಯವರೆಗೆ ನಡೆಯಲಿದೆ. ಬಾಲವಟಿಕಾ 1 ಮತ್ತು 3 (ಅನ್ವಯವಾಗುವಲ್ಲಿ) ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು kvsonlineadmission.kvs.gov.in ಲಿಂಕ್ https://balvatika.kvs.gov.in ನಲ್ಲಿ ಲಭ್ಯವಿರುತ್ತದೆ.

1 ನೇ ತರಗತಿಗೆ ಪ್ರವೇಶ ಪಡೆಯಲು, ಮಗುವಿಗೆ 2025ರ ಮಾರ್ಚ್ 31 ಕ್ಕೆ ಕನಿಷ್ಠ ಆರು ವರ್ಷ ವಯಸ್ಸಾಗಿರಬೇಕು. ಅಂದರೆ, ಮಗು 2019ರ ಏಪ್ರಿಲ್ 1 ರಂದು ಅಥವಾ ಅದಕ್ಕೂ ಮೊದಲು ಜನಿಸಿರಬೇಕು. 2025ರ ಮಾರ್ಚ್ 31ಕ್ಕೆ ಅನ್ವಯವಾಗುವಂತೆ ಬಾಲವಟಿಕಾ -1 ಕ್ಕೆ ಸೇರಿಸಲು 3 ರಿಂದ 4 ವರ್ಷ, ಬಾಲವಟಿಕಾ -2ಕ್ಕೆ ಸೇರಿಸಲು 4 ರಿಂದ 5 ವರ್ಷ ಮತ್ತು ಬಾಲವಟಿಕಾ -3ಕ...