ಭಾರತ, ಮಾರ್ಚ್ 30 -- ನೀವು ಕಚೇರಿ ಅಥವಾ ಕಾಲೇಜಿಗೆ ಪ್ರತಿದಿನ ಕುರ್ತಾ ಧರಿಸಿ ಹೋಗುತ್ತಿದ್ದರೆ, ಒಂದೇ ಪ್ಯಾರ್ಟನ್ ಇದ್ದರೆ ಬೇಸರ ಮೂಡಿರುತ್ತದೆ. ಹಾಗಂತ ಚಿಂತೆ ಮಾಡುವ ಅಗತ್ಯವಿಲ್ಲ. ಇತ್ತೀಚಿನ ದಿನಗಳಲ್ಲಿ ಹೊಸ ಹೊಸ ಸ್ಟೈಲ್‌ನ, ಬೇರೆ ಬೇರೆ ಡಿಸೈನ್‌ನ ಕುರ್ತಾಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಈ ಕುರ್ತಾಗಳು ಜೀನ್ಸ್‌, ಪಾಲಾಝೋ ಜೊತೆ ಸಖತ್ ಲುಕ್ ನೀಡುತ್ತವೆ. ಈ ಪ್ಯಾರ್ಟನ್‌ನಲ್ಲಿ ನೀವು ಕುರ್ತಾ ಹೊಲಿಸಬಹುದು ನೋಡಿ. ‌

ಸ್ಲೀವ್‌ಲೆಸ್‌, ರೌಂಡ್‌ ನೆಕ್‌ ಇರುವ ಈ ಲಾಂಗ್ ಕುರ್ತಾ ಫ್ರಂಟ್‌ ಕಟ್ ಡಿಸೈನ್ ಹೊಂದಿದೆ. ಇದನ್ನು ಜೀನ್ಸ್ ಹಾಗೂ ಪಾಲಾಝೋ ಎರಡರ ಜೊತೆಗೂ ಧರಿಸಬಹುದು. ಇದು ಕ್ಯಾಶುವಲ್ ನೋಟ ನೀಡುವ ಕಾರಣ ಕಾಲೇಜು ಮತ್ತು ಕಚೇರಿಗೆ ಧರಿಸಲು ಸೂಕ್ತ ಎನ್ನಿಸುತ್ತದೆ

ಸ್ಲಿಟ್ ಡಿಸೈನ್‌ ಕುರ್ತಾವನ್ನು ಜೀನ್ಸ್ ಜೊತೆ ಧರಿಸಿದರೆ ಗ್ಲಾಮರ್ ಲುಕ್ ಸಿಗುವುದು ಖಂಡಿತ. ಪೂರ್ತಿ ಕಾಲಿನವರೆಗೂ ಬರುವ ಮುಂದೆ ಸೀಳಿದಂತಿರುವ ಈ ಕುರ್ತಾ ಎತ್ತರ ಇರುವವರಿಗೆ ಹೇಳಿ ಮಾಡಿಸಿದಂತಿರುತ್ತದೆ. ಇದರ ಜೊತೆ ಪೆನ್ಸಿಲ್ ಪ್ಯಾಂಟ್ ಕೂಡ ಧರಿಸ...