ಭಾರತ, ಫೆಬ್ರವರಿ 10 -- ಕುಂಭಮೇಳ: ದಕ್ಷಿಣ ಭಾರತದ ಐತಿಹಾಸಿಕ ಕುಂಭಮೇಳ ಟಿ ನರಸೀಪುರದ ತ್ರಿವೇಣಿ ಸಂಗಮದಲ್ಲಿ ಇಂದಿನಿಂದ (ಫೆಬ್ರವರಿ 10, ಸೋಮವಾರ) ಆರಂಭವಾಗಿದೆ. ಪ್ರತಿ ಮೂರು ವರ್ಷಗಳಗೊಮ್ಮೆ ನಡೆಯುವ ಈ ಕುಂಭಮೇಳಕ್ಕೆ ಬೆಳಿಗ್ಗೆ 11 ಗಂಟೆಗೆ ಅಗಸ್ತೇಶ್ವರನಿಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಗಿದೆ. ಕಾವೇರಿ, ಕಪಿಲ ಹಾಗೂ ಸ್ಪಟಿಕ ಸರೋವರ ಸಂಧಿಸುವ ಸಂಗಮ ಸ್ಥಳವಾಗಿರುವ ಟಿ ನರಸೀಪುರದ ತ್ರಿವೇಣೆ ಸಂಗಮದಲ್ಲಿ ಕುಂಭಮೇಳ ನಡೆಯುತ್ತಿದೆ. 1989 ರಲ್ಲಿ ಆದಿಚುಂಚನಗಿರಿ ಮಠದ ಶ್ರೀಗಳು ಹಾಗೂ ಸುತ್ತೂರು ಶ್ರೀಗಳಿಂದ ಕುಂಭಮೇಳಕ್ಕೆ ಮೊದಲ ಬಾರಿ ಚಾಲನೆ ನೀಡಲಾಗಿತ್ತು. ಅಂದಿನಿಂದ ಇಂದಿನವರೆಗೆ 12 ಕುಂಭಮೇಳು ನಡೆದಿವೆ.
ಇಂದಿನ (ಫೆ.10) ಕಾರ್ಯಕ್ರಮದ ವಿವರ: ಅಗಸ್ತೇಸ್ವರ ದೇವಸ್ಥಾನದಲ್ಲಿ ತ್ರಯೋದಶಿ, ಪುಷ್ಯ ಪ್ರಾತಃಕಾಲ 9 ಗಂಟೆಗೆ ಶ್ರೀ ಅಗಸ್ತೇಶ್ವರ ಸನ್ನಿಧಿಯಲ್ಲಿ ಅನುಜ್ಞೆ, ಪುಣ್ಯಾಹ, ಗಣಹೋಮ, ಪೂರ್ಣಾಹುತಿ, ಅಭಿಷೇಕ, ಮಹಾಮಂಗಳಾರತಿ. ಸಂಜೆ 5 ಗಂಟೆಗೆ ಧರ್ಮಸಭೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಅತಿಥಿ ಗಣ್ಯರಿಂದ ...
Click here to read full article from source
To read the full article or to get the complete feed from this publication, please
Contact Us.