ಭಾರತ, ಮಾರ್ಚ್ 18 -- ಭಾರತದಲ್ಲಿ ಉತ್ತರ ಭಾರತಕ್ಕೂ ದಕ್ಷಿಣ ಭಾರತಕ್ಕೂ ಸಾಕಷ್ಟು ವ್ಯತ್ಯಾಸಗಳಿವೆ. ದಕ್ಷಿಣ ಭಾರತದಲ್ಲಿ ಹಲವು ಸುಂದರ ದೇವಾಲಯಗಳು, ಪಾರಂಪರಿಕ ಸ್ಮಾರಕಗಳು, ಪಶ್ಚಿಮ ಘಟ್ಟ, ಬಗೆಬಗೆಯ ಖಾದ್ಯ, ಸಮುದ್ರಾಹಾರ ಹೆಸರುವಾಸಿ. ಸುಂದರ ಕಡಲತೀರಗಳು, ಹಚ್ಚಹಸಿರಿನ ಗಿರಿಧಾಮಗಳು, ಅದ್ಭುತ ಜಲಪಾತಗಳು ಹೀಗೆ ದಕ್ಷಿಣ ಭಾರತವೆಂದರೆ ಪ್ರವಾಸಿಗರ ಸ್ವರ್ಗ. ಕೇರಳ, ತಮಿಳುನಾಡಿನಲ್ಲಿ ಹಲವು ಸುಂದರ ತಾಣಗಳಿವೆ. ಸಂಸ್ಕೃತಿ, ಸೌಂದರ್ಯದಲ್ಲಿ ಶ್ರೀಮಂತಿಕೆಗೆ ಹೆಸರುವಾಸಿಯಾಗಿದೆ. ಸಾಂಪ್ರದಾಯಿಕ ಮೌಲ್ಯಗಳನ್ನು ಹೆಚ್ಚು ಗೌರವಿಸುವ ದಕ್ಷಿಣ ಭಾರತೀಯ ಜನರು, ತಮ್ಮ ಸಂಸ್ಕೃತಿಯನ್ನು ಬಿಟ್ಟುಕೊಡುವುದಿಲ್ಲ. ದಕ್ಷಿಣ ಭಾರತವನ್ನು ಸಂಪೂರ್ಣ ಸುತ್ತಲು ತಿಂಗಳೇ ಬೇಕು. ಆದರೆ, ಪ್ರಮುಖ ತಾಣಗಳಿಗೆ ಬೆಂಗಳೂರಿನಿಂದ ಹೋಗಿ ಬರಲು 8 ದಿನಗಳು ಸಾಕು.

ಬೆಂಗಳೂರಿನಿಂದ ದಕ್ಷಿಣ ಭಾರತ ಪ್ರವಾಸಕ್ಕೆ ಕೆಎಸ್‌ಟಿಡಿಸಿಯಿಂದ ಒಂದೊಳ್ಳೆ ಪ್ರವಾಸ ಪ್ಯಾಕೇಜ್‌ (KSTDC Package) ಇದೆ. ಎಂಟು ದಿನಗಳಲ್ಲಿ ಹೋಗಿ ಬರಬಹುದು.

ಬೆಳಗ್ಗೆ 06 ಗಂಟೆಗೆ BMTC ಬಸ್ ನಿ...