ಭಾರತ, ಮಾರ್ಚ್ 18 -- ಕರ್ನಾಟಕವು ಶ್ರೀಮಂತ ವಾಸ್ತುಶಿಲ್ಪಕ್ಕೆ ಸಾಕ್ಷಿ. 'ಶಿಲೆಗಳು ಸಂಗೀತವಾ ಹಾಡಿವೆ, ಬೇಲೂರ ಗುಡಿಯಲ್ಲಿ ಕೇಶವನೆದುರಲ್ಲಿ ಶಿಲೆಗಳು ಸಂಗೀತವಾ ಹಾಡಿವೆ' ಎಂಬ ಚಿ ಉದಯಶಂಕರ್‌ ಸಾಹಿತ್ಯದಂತೆ ಕಲ್ಲಿನ ಒಂದೊಂದು ಕೆತ್ತನೆಗಳು ಸಾವಿರ ಪದಗಳನ್ನು ಮಾತನಾಡುತ್ತವೆ. ಹಾಸನ ಜಿಲ್ಲೆಯ ಬೇಲೂರು ಮಾತ್ರವಲ್ಲದೆ ಹಳೇಬೀಡು ಹೊಯ್ಸಳೇಶ್ವರ ದೇಗುಲ ಹಾಗೂ ಶ್ರವಣಬೆಳಗೊಳದಲ್ಲಿರುವ ಗೊಮ್ಮಟೇಶ್ವರ ಬೆಟ್ಟ ಇಲ್ಲಿನ ಶ್ರೀಮಂತ ಇತಿಹಾಸವನ್ನು ಬಿಂಬಿಸುತ್ತದೆ. ವಿಶ್ವ ಪಾರಂಪರಿಕ ತಾಣಗಳಾಗಿರುವ ಹಾಸನದ ಮೂರು ತಾಣಗಳಿಗೆ ಒಮ್ಮೆ ಹೋಗಿಬರೋಣ ಅತಾ ನಿಮಗೆ ಅನಿಸಬಹುದು. ಚಿಂತೆ ಬೇಡ. ಕೆಎಸ್‌ಟಿಡಿಸಿಯಿಂದ (KSTDC Package) ಒಂದೊಳ್ಳೆ ಪ್ರವಾಸ ಪ್ಯಾಕೇಜ್‌ ಇದೆ. ಇದರ ವಿವರ ಮುಂದಿದೆ ನೋಡಿ.

ಬೇಲೂರು ಮತ್ತು ಹಳೇಬೀಡು ಹೊಯ್ಸಳ ರಾಜವಂಶದ ಅತ್ಯಂತ ಪ್ರಸಿದ್ಧ ದೇವಾಲಯಗಳು. ಕಲ್ಲಿನ ಸುಂದರ ಕೆತ್ತನೆಗಳು ಅದ್ಭುತ ವಾಸ್ತುಶಿಲ್ಪಕ್ಕೆ ಸಾಕ್ಷಿ. ಇದೇ ವೇಳೆ ಶ್ರವಣಬೆಳಗೊಳವು ಜೈನ ದೇವಾಲಯಗಳ ಪಟ್ಟಿಯಲ್ಲಿ ಸ್ಥಾನ ಪಡೆಯುತ್ತದೆ. ಇಲ್ಲಿನ ಗೊಮ್ಮಟೇಶ್ವ...