ಭಾರತ, ಮಾರ್ಚ್ 17 -- ಬೆಂಗಳೂರು ಕರ್ನಾಟಕದ ರಾಜಧಾನಿಯಾದರೆ, ಅರಮನೆಗಳ ನಗರಿ ಮೈಸೂರು ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ. ಮೈಸೂರು ನಗರದೊಳಗೆ ಹಲವು ಪ್ರವಾಸಿ ತಾಣಗಳಿವೆ. ಇವೆಲ್ಲವೂ ಒಂದೇ ದಿನದಲ್ಲಿ ನೋಡಿ ಮುಗಿಸುವಂಥವಲ್ಲ. ಹೀಗಾಗಿ ಎರಡು ದಿನವಾದರೂ ಬೇಕಾಗುತ್ತದೆ. ಕೆಎಸ್‌ಟಿಡಿಸಿಯಿಂದ (KSTDC Package) ಮೈಸೂರಿಗೆ ಎರಡು ದಿನಗಳ ಪ್ರವಾಸ ಪ್ಯಾಕೇಜ್‌ ಇದ್ದು, ಬೆಂಗಳೂರಿನಿಂದ ಹೊರಟು ಅರಮನೆ ನಗರಿಯನ್ನು ಕಣ್ತುಂಬಿಕೊಳ್ಳುವವರಿಗೆ ಇದು ಉತ್ತಮ ಆಯ್ಕೆ. ವಿಶೇಷವೆಂದರೆ, ಈ ಪ್ಯಾಕೇಜ್ ಅಡಿಯಲ್ಲಿ ಪ್ರತಿನಿತ್ಯವೂ ಮೈಸೂರು ಪ್ರವಾಸ ಮಾಡಬಹುದು.ಕೆಎಸ್‌ಟಿಡಿಸಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿಸಿಕೊಂಡರೆ ಸಾಕು.

ಮೈಸೂರು ನಗರ ಪ್ರವಾಸಕ್ಕೆ ಒಬ್ಬರಿಗಾಗುವ ವೆಚ್ಚ ತುಂಬಾ ಕಡಿಮೆ. 1950 ರೂ ಪಾವತಿಸಿದರೆ ಎರಡು ದಿನ ಮಂಡ್ಯ ಹಾಗೂ ಮೈಸೂರು ಪ್ರವಾಸ ಮಾಡಬಹುದು. ಕೆಆರ್‌ಎಸ್‌ ಅಣೆಕಟ್ಟು ನೋಡಿಕೊಂಡು, ಚಾಮುಂಡೇಶ್ವರಿಯ ದರ್ಶನ ಪಡೆದು ಅರಮನೆಯ ಸೌಂದರ್ಯ ಸವಿಯಬಹುದು.

ಇದನ್ನೂ ಓದಿ | IRCTC Package: ಮಕ್ಕಳ ಎಕ್ಸಾಂ ಮುಗಿದ ತಕ...