Bengaluru, ಮಾರ್ಚ್ 17 -- ಮಂತ್ರಾಲಯದ ಗುರು ರಾಘವೇಂದ್ರ ಮಠಕ್ಕೆ ತೆರಳುವ ಭಕ್ತರ ಸಂಖ್ಯೆ ಹಲವು. ಬೆಂಗಳೂರಿನಿಂದ ನಿತ್ಯವೂ ಅಪಾರ ಸಂಖ್ಯೆಯ ಜನರು ಮಂತ್ರಾಲಯಕ್ಕೆ ತೆರಳುತ್ತಾರೆ. ಮಂತ್ರಾಲಯದ ಜೊತೆಗೆ ಉತ್ತರ ಕರ್ನಾಟಕ ಇನ್ನೂ ಒಂದೆರಡು ಪ್ರಸಿದ್ಧ ಸ್ಥಳಗಳನ್ನು ನೋಡಿಕೊಂಡು ಬರಲು ಕೆಎಸ್‌ಟಿಡಿಸಿಯ ಟೂರ್‌ ಪ್ಯಾಕೇಜ್‌ ನಿಮಗೆ ಉತ್ತಮ ಆಯ್ಕೆ ಆಗಬಹುದು. 3 ದಿನದ ಪ್ರವಾಸದಲ್ಲಿ ಮಂತ್ರಾಲಯದ ಜೊತೆಗೆ ತುಂಗಾಭದ್ರಾ ಅಣೆಕಟ್ಟು ಹಾಗೂ ಹಂಪಿಯ ಸೌಂದರ್ಯ ಸವಿಯಬಹುದು.‌ ಇಲ್ಲಿನ ಕಲ್ಲಿನ ರಥ, ವಿರೂಪಾಕ್ಷ ದೇವಸ್ಥಾನ ಸೇರಿ ಉತ್ತರ ಕರ್ನಾಟಕದ ದರ್ಶನ ಮಾಡಬಹುದು. ಈ ಟೂರ್‌ ಪ್ಯಾಕೇಜ್‌ ಕುರಿತ ವಿವರ ಇಲ್ಲಿದೆ.

ಈ ಪ್ಯಾಕೇಜ್‌ಗೆ ಒಬ್ಬರಿಗೆ 7910 ರೂ ವೆಚ್ಚವಾಗುತ್ತದೆ. ಇಬ್ಬರಿಗೆ ಶೇರಿಂಗ್‌ ಪ್ಯಾಕೇಜ್‌ 6260 ರೂ ವೆಚ್ಚವಾಗುತ್ತದೆ.

ಇದನ್ನೂ ಓದಿ | IRCTC Package: ಮಕ್ಕಳ ಎಕ್ಸಾಂ ಮುಗಿದ ತಕ್ಷಣ ಟೂರ್‌ ಹೋಗೋಣ ಅಂತಿದ್ರೆ ವಿಸ್ಟಾಡೋಮ್ ಕೋಚ್‌ನಲ್ಲಿ ಕರಾವಳಿ ಕಡೆ ನಡೀರಿ

ಮೊದಲ ದಿನ ರಾತ್ರಿ 08.00 ಗಂಟೆಗೆ ಬೆಂಗಳೂರಿನ ಯಶವಂತಪುರದ ಬಿ...