Mandya, ಏಪ್ರಿಲ್ 15 -- KRS Reservoir Level: ಕಾವೇರಿ ಕೊಳ್ಳದ ಪ್ರಮುಖ ಜಲಾಶಯವಾಗಿರುವ ಕರ್ನಾಟಕದ ಜತೆಗೆ ತಮಿಳುನಾಡಿಗೂ ನೀರು ಹರಿಸುವ ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರ ಜಲಾಶಯದಲ್ಲಿ ನೀರಿನ ಮಟ್ಟದಲ್ಲಿ ಕುಸಿತ ಕಂಡಿದೆ. ಜಲಾಶಯದ ನೀರಿನ ಪ್ರಮಾಣ ಆರ್ಧದಷ್ಟು ಕುಸಿತ ಕಂಡಿದೆ. ಬೇಸಿಗೆ ಇನ್ನೂ ಮುಗಿಯಲು ಒಂದೂವರೆ ತಿಂಗಳು ಇರುವಾಗ ನೀರಿನ ಪ್ರಮಾಣದಲ್ಲಿ ಕಡಿಮೆಯಾಗಿದೆ. ಇದರಿಂದ ಕೃಷಿಗೆ ಮಾತ್ರವಲ್ಲದೇ ಬೆಂಗಳೂರು, ಮೈಸೂರು ಸಹಿತ ಪ್ರಮುಖ ನಗರಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಬಹುದಾ ಎನ್ನುವ ಪ್ರಶ್ನೆ ಎದುರಾಗಿದೆ. ಆದರೆ ಹೋದ ವರ್ಷಕ್ಕೆ ಇದೇ ಅವಧಿಯಲ್ಲಿ ಈಗಿದ್ದ ನೀರಿನ ಪ್ರಮಾಣದ ಅರ್ಧದಷ್ಟು ಇತ್ತು. ಹಿಂದಿನ ವರ್ಷಕ್ಕೆ ಹೋಲಿಸಿದರೆ ನೀರಿನ ಪ್ರಮಾಣ ಹೆಚ್ಚಿರುವುದರಿಂದ ಬೇಸಿಗೆವರೆಗೂ ಅಷ್ಟಾಗಿ ಸಮಸ್ಯೆಯಾಗದು ಎನ್ನಲಾಗುತ್ತಿದೆ. ಈ ಬೇಸಿಗೆ ಅವಧಿಯನ್ನು ನಿರ್ವಹಣೆ ಮಾಡಲು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಅಣಿಯಾಗುತ್ತಿದ್ದಾರೆ.

Published by HT Digital Content Services with p...