ಭಾರತ, ಮಾರ್ಚ್ 2 -- KRG Studios: ಸ್ಯಾಂಡಲ್‌ವುಡ್‌ ಚಿತ್ರರಂಗ ಮೊದಲಿನಂತಿಲ್ಲ. ನೂರಾರು ಕೋಟಿ ಬಜೆಟ್‌ನ ಸಿನಿಮಾಗಳೂ ಇದೀಗ ಕನ್ನಡದಲ್ಲಿ ನಿರ್ಮಾಣವಾಗುತ್ತಿವೆ. ಅಷ್ಟೇ ಯಾಕೆ ಸಾವಿರ ಕೋಟಿ ಕಲೆಕ್ಷನ್‌ ಮಾಡಿದ ಸಿನಿಮಾಗಳೂ ಸ್ಯಾಂಡಲ್‌ವುಡ್‌ನಲ್ಲಿವೆ. ಅದೇ ರೀತಿ ಇಲ್ಲಿನ ಚಿತ್ರ ನಿರ್ಮಾಣ ಸಂಸ್ಥೆಗಳು ಪರಭಾಷೆಗೂ ಕಾಲಿಟ್ಟು ಅಲ್ಲಿಯೂ ಸಿನಿಮಾ ನಿರ್ಮಾಣ ಮಾಡುತ್ತಿವೆ. ಈಗಾಗಲೇ ಹೊಂಬಾಳೆ ಫಿಲಂಸ್ ಆ ಸಾಹಸ ಮಾಡಿ, ಯಶಸ್ವಿಯಾಗಿದೆ. ಈಗ ಕೆಆರ್‌ಜಿ ಸ್ಡುಡಿಯೋ ಸಹ ಮಾಲಿವುಡ್‌ ಮತ್ತು ಕಾಲಿವುಡ್‌ಗೆಹೊರಟು ನಿಂತಿದೆ.

ಈಗಾಗಲೇ ಮಲಯಾಳಂನಲ್ಲಿ ಸೂಫಿಯುಂ ಸುಜಾತಯುಂ, ‌ಹೋಮ್, ಅಂಗಮಲೇ ಬಾಯ್ಸ್ ನಂತಹ ಸೂಪರ್‌ ಹಿಟ್‌ ಸಿನಿಮಾಗಳನ್ನು ನೀಡಿದ ಫ್ರೈಡೇ ಫಿಲಂ ಹೌಸ್‌ ಜತೆಗೆ ಪಡಕ್ಕಲಂ ಎಂಬ ಮಲಯಾಳಂ ಚಿತ್ರಕ್ಕಾಗಿ ಕೆಆರ್‌ಜಿ ಕೈ ಜೋಡಿಸಿದೆ. ಈ‌ ಚಿತ್ರಕಥೆಯನ್ನು ಮನು ಸ್ವರಾಜ್ ಬರೆದು ನಿರ್ದೇಶಿಸಲಿದ್ದಾರೆ. ಖ್ಯಾತ ನಿರ್ದೇಶಕ ಬೇಸಿಲ್ ಜೋಸೆಫ್ ಜತೆ ಸಹಾಯಕ ನಿರ್ದೇಶಕನಾಗಿ ಮನು ಕಾರ್ಯ ಕೆಲಸ ಮಾಡಿದ್ದರು.

ಈ ಮೊದಲು 'ವಾಲಟಿ' ಎಂಬ ಮಲಯಾಳಂ ಚಿ...