ಭಾರತ, ಫೆಬ್ರವರಿ 27 -- ಕೋರಿಯನ್ ಡ್ರಾಮಾಗಳು (ಕೆ-ಡ್ರಾಮಾ) ಇತ್ತೀಚಿನ ವರ್ಷಗಳಲ್ಲಿ ವಿಶ್ವದಾದ್ಯಂತ ಜನಪ್ರಿಯ. ಉತ್ತಮ ಕಥೆ, ಸಶಕ್ತ ಪಾತ್ರ ಚಿತ್ರಣ, ಉತ್ಕೃಷ್ಟ ನಿರ್ಮಾಣ ಗುಣಮಟ್ಟ ಮತ್ತು ಸಂವೇದನಾಶೀಲತೆಯು ಈ ವೆಬ್‌ಸರಣಿಗಳನ್ನು ವಿಶಿಷ್ಟವಾಗಿಸುತ್ತವೆ. ಕೆ-ಡ್ರಾಮಾಗಳು ಸಾಮಾಜಿಕ ಸಮಸ್ಯೆಗಳನ್ನು ಸೊಗಸಾಗಿ ಪ್ರತಿಬಿಂಬಿಸುತ್ತವೆ. ಅತ್ಯಂತ ಸೂಕ್ಷ್ಮ ಸಂದೇಶಗಳನ್ನೂ ಮನೋಜ್ಞವಾದ ರೀತಿಯಲ್ಲಿ ಪ್ರೇಕ್ಷಕರ ಹೃದಯಕ್ಕೆ ತಲುಪಿಸುತ್ತವೆ. ನೀವು ಈವರೆಗೆ ನೀವು ಕೊರಿಯನ್ ಡ್ರಾಮಾಗಳನ್ನು ನೋಡಿಲ್ಲ ಎಂದಾದರೆ, ಇವತ್ತಿನಿಂದ ನೋಡಲು ಶುರು ಮಾಡಬೇಕು ಎಂದುಕೊಂಡಿದ್ದರೆ ಈ ವೆಬ್‌ ಸರಣಿಗಳನ್ನು ಗಮನಿಸಬಹುದು.

ಈ ಸರಣಿಯು ಯುವ ಪೀಳಿಗೆಗಳ ಕನಸುಗಳನ್ನು ಮತ್ತು ಅದನ್ನು ಈಡೇರಿಸಿಕೊಳ್ಳಲು ಅವರು ಮಾಡುವ ಪ್ರಯತ್ನಗಳನ್ನು ಕಟ್ಟಿಕೊಡುತ್ತದೆ. ಸ್ಟಾರ್ಟ್-ಅಪ್ ಬ್ಯುಸಿನೆಸ್ ಜಗತ್ತಿನ ತಿರುವುಮುರುವುಗಳು, ಪ್ರೀತಿಯ ಜಗತ್ತು, ವೃತ್ತಿಪರ ಸಂಕಟಗಳು ಈ ಸರಣಿಯ ಪ್ರಮುಖ ಆಕರ್ಷಣೆಗಳು. ಯುವಕರು ತಮ್ಮ ಕನಸುಗಳನ್ನು ನಿಜಗೊಳಿಸಲು ಹೇಗೆ ಹೋರಾಡುತ್ತಾರೆ ಎಂಬು...